ಕುಂದಾಪುರ: ವಿದ್ಯಾರ್ಥಿನಿ ನೇಣಿಗೆ ಶರಣು
ಕುಂದಾಪುರ: ಬಿಲ್ಲಾಡಿ ಗ್ರಾಮದ ಬನ್ನೇರಳಕಟ್ಟೆ ಎಂಬಲ್ಲಿ ಏಳನೇ ತರಗತಿ ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇ 26ರಂದು ನಡೆದಿದೆ.
ಬನ್ನೇರಳಕಟ್ಟೆ ನಿವಾಸಿ ಕೃಷ್ಣ ಎಂಬವರ ಪುತ್ರಿ ಹದಿಮೂರು ವರ್ಷದ ಪ್ರಿಯಾ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಘಟನೆ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




