ಐಪಿಎಲ್ ಬೆಟ್ಟಿಂಗ್ ಹಣದ ವಿಚಾರಕ್ಕೆ ಯುವಕರ ಗುಂಪಿನಲ್ಲಿ ಜಗಳ: ಓರ್ವನ ಕೊಲೆಯಲ್ಲಿ ಅಂತ್ಯ

ಮಂಡ್ಯ: ಐಪಿಎಲ್ ಬೆಟ್ಟಿಂಗ್ ಹಣದ ವಿಚಾರಕ್ಕೆ ಯುವಕರ ಗುಂಪಿನಲ್ಲಿ ಜಗಳವಾಗಿ, ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಮದ್ದೂರಿನ ಹುಲಿಗೆರೆಪುರದಲ್ಲಿ ನಡೆದಿದೆ.
ಚಿಕ್ಕರಸಿನಕೆರೆ ಗ್ರಾಮದ ಪುನೀತ್ (30) ಕೊಲೆಯಾದ ಯುವಕನಾಗಿದ್ದಾನೆ. ಪುನೀತ್ ಸ್ನೇಹಿತರ ಜೊತೆಗೆ ಐಪಿಎಲ್ ಬೆಟ್ಟಿಂಗ್ ಕಟ್ಟಿದ್ದ. ಆತ ಗೆದ್ದ ಹಣವನ್ನು ಕೊಡುವಂತೆ ಕೇಳಿದ್ದಾನೆ. ಆಗ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಮರದ ತುಂಡಿನಿಂದ ಪುನೀತ್ ತಲೆಯ ಮೇಲೆ ಸ್ನೇಹಿತ ಹಲ್ಲೆ ನಡೆಸಿದ್ದಾನೆ.
ಕೂಡಲೆ ಹಲ್ಲೆಗೊಳಗಾದ ಪುನೀತ್‍ನನ್ನು ಕೆ.ಎಂ ದೊಡ್ಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಪುನೀತ್ ಸಾವನ್ನಪ್ಪಿದ್ದಾನೆ.