February 1, 2026

ಮಹಡಿಯ ಮೇಲೆ ಆಟವಾಡುತ್ತಿದ್ದಾಗ ಹೈಟೆನ್ಷನ್ ವಯರ್ ಸ್ಪರ್ಶ: ಬಾಲಕಿ ಸ್ಥಳದಲ್ಲೇ ಮೃತ್ಯು

0
image_editor_output_image-1688304789-1684905830713.jpg

ಬೆಳಗಾವಿ: ಮನೆ ಮುಂದಿನ ಹೈಟೆನ್ಷನ್ ತಂತಿ ತಾಗಿ 13 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಮಚ್ಛೆ ಗ್ರಾಮದಲ್ಲಿ ನಡೆದಿದೆ.

ಮಧುರಾ ಮೋರೆ (13) ಮೃತಪಟ್ಟ ಬಾಲಕಿ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು, ತನ್ನ ಮನೆಯ ಒಂದನೇ ಮಹಡಿಯ ಮೇಲೆ ಆಟ ಆಡುತ್ತಿದ್ದ ಸಂದರ್ಭ ಹೈಟೆನ್ಷನ್ ವಯರ್ ತಾಗಿ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಹೈಟೆನ್ಷನ್ ತಂತಿ ಇದ್ದ ಹಿನ್ನೆಲೆ ಮನೆ ಕಟ್ಟದಂತೆ ಮೋರೆ ಕುಟುಂಬಕ್ಕೆ ಹೆಸ್ಕಾಂ ಮೊದಲೇ ನೋಟಿಸ್ ನೀಡಿತ್ತು. ಹೆಸ್ಕಾಂ ನೋಟಿಸ್ ನೀಡಿದ್ದರೂ ಸಹಿತ ಅದನ್ನು ನಿರ್ಲಕ್ಷ್ಯ ಮಾಡಿ ಮೋರೆ ಕುಟುಂಬ ಮನೆ ನಿರ್ಮಿಸಿದ್ದರು.

Leave a Reply

Your email address will not be published. Required fields are marked *

error: Content is protected !!