ಕಾಪು: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿದ ನಾಲ್ವರ ವಿರುದ್ಧ FIR ದಾಖಲು
ಕಾಪು: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿ ಸಾರ್ವಜನಿಕ ಸಂಚಾರಕ್ಕೆ ತೊಡಕು ಉಂಟು ಮಾಡಿದ ನಾಲ್ವರು ಕಾರು ಚಾಲಕರ ಮೇಲೆ ಕಾಪು ಪೋಲಿಸರು ಕೇಸ್ ದಾಖಲಿಸಿದ್ದಾರೆ.
ವಾಹನ ಚಾಲಕರಾದ ಗುಡ್ಡೆಯಂಗಡಿ ಉದ್ಯಾವರ ಗ್ರಾಮ ಅಯಾನ್ (24), ಕುಂಜಿಬೆಟ್ಟು ಮಿಶಾಲ್ವುದ್ದೀನ್ (23) ಉಡುಪಿಯ ಹೈಕ ಬಿಲ್ಡಿಂಗ್ ಶಾನೂನ್ ಡಿಸೋಜಾ (25), ಕೊಡಂತೂರು 10ನೇ ಕ್ರಾಸ್ ವಿವೇಕ್ (23) ಎಂಬ ನಾಲ್ವರ ವಿರುದ್ದ ಕೇಸು ದಾಖಲಿಸಿದ್ದರೆ.
ಮೇ.23ರಂದು ಕಾಫು ಠಾಣಾ ಪಿಎಸ್ಐ ಸುಮಾ ಇವರಿಗೆ ಓರ್ವರು ಕರೆಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ರಾ.ಹೆ 66 ರಸ್ತೆಯಲ್ಲಿ 1 ಜೀಪು ಹಾಗೂ 3 ಕಾರುಗಳನ್ನು ಅದರ ಚಾಲಕರುಗಳು ಅತೀ ವೇಗ ಮತ್ತು ತೀವ್ರ ಅಜಾಗರೂಕತೆಯಿಂದ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕರವಾಗುವ ರೀತಿಯಲ್ಲಿ ರಸ್ತೆಯ ತುಂಬಾ ಅಡ್ಡದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ವಿಡಿಯೋ ವೈರಲ್ ಆಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು.