March 16, 2026

ಬಿಜೆಪಿ ನಾಯಕಿ ಉಮಾಭಾರತಿ ಆಸ್ಪತ್ರೆಗೆ ದಾಖಲು

0
image_editor_output_image-1945193966-1684734062713.jpg

ಭೋಪಾಲ್‌: ಕೇಂದ್ರದ ಮಾಜಿ ಸಚಿವೆ,ಬಿಜೆಪಿ ನಾಯಕಿ ಉಮಾಭಾರತಿ ಅವರು ಅನಾರೋಗ್ಯದ ಕಾರಣ ಶನಿವಾರ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಅವರು ರವಿವಾರ ರಾತ್ರಿ ಟ್ವಿಟರ್ ಪೋಸ್ಟ್‌ನಲ್ಲಿ ತಮ್ಮ ಅನಾರೋಗ್ಯದ ವಿಚಾರ ಬಹಿರಂಗಪಡಿಸಿದ್ದಾರೆ.

ಕಳೆದ ರಾತ್ರಿ 11 ಗಂಟೆಯ ಸುಮಾರಿಗೆ, ನಾನು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದಾಗ ನನ್ನನ್ನು ನನ್ನ ನಿವಾಸದ ಬಳಿಯ ಸ್ಮಾರ್ಟ್ ಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ನನ್ನ ಎಲ್ಲಾ ಪರೀಕ್ಷೆಗಳಲ್ಲಿ, ನಾನು ಆರೋಗ್ಯವಾಗಿದ್ದೇನೆ ಆದರೆ ತುಂಬಾ ದಣಿದಿದ್ದೇನೆ ಮತ್ತು ದುರ್ಬಲಳಾಗಿದ್ದೇನೆ ಎಂದು ಟ್ವಿಟರ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!