ಪುತ್ತೂರು: ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಪ್ರಕರಣ:
ಆರೋಪಿಗಳನ್ನು ಬಂಧಿಸಲು 24 ಗಂಟೆ ಗಡುವು ನೀಡಿದ ಸಿ ಎಫ್ ಐ
ಪುತ್ತೂರು: ಕೊಂಬೆಟ್ಟು ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪುತ್ತೂರು ನಗರ ಪೊಲೀಸ್ ಠಾಣೆ ಆವರಣದಲ್ಲಿ ಜಮಾಯಿಸಿದ ಬಳಿಕ ಡಿವೈಎಸ್ಪಿ ಧನ್ಯ ಅವರ ಭರವಸೆಯಂತೆ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲು ಗಡು ನೀಡಿ ಧರಣಿ ಹಿಂಪಡೆದಿದ್ದಾರೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಜಿಲ್ಲಾಧ್ಯಕ್ಷ ಅನ್ಸಾರ್ ಬೆಳ್ಳಾರೆ, ಜಿಲ್ಲಾ ಮುಖಂಡ ರಿಯಾಜ್ ಅಂಕತಡ್ಕ, ಪಾರೂಕ್ ಕಬಕ, ಸಂಶುದ್ದಿನ್ ವಿಟ್ಲ ಸೇರಿದಂತೆ ಸಂಘಟನೆಯ ಬೆಂಬಲಿತ ವಿದ್ಯಾರ್ಥಿಗಳು ಧರಣಿಯಲ್ಲಿ ಪಾಲ್ಗೊಂಡರು.








