July 3, 2026

ಪುತ್ತೂರು: ಕುಂಬ್ರದಲ್ಲಿ ಮಸೀದಿಯ ಕೌಂಪೌಂಡ್‌ಗೆ ಗುದ್ದಿದ ಓಮ್ನಿ – ಗಾಯ

0
IMG-20230518-WA0025.jpg

ಪುತ್ತೂರು: ಪುತ್ತೂರು ತಾಲೂಕಿನ ಕುಂಬ್ರದಲ್ಲಿ ಓವರ್‌ಟೇಕ್ ಭರದಲ್ಲಿ ಓಮ್ನಿ ಕಾರೊಂದು ಮಸೀದಿಯ ಕೌಂಪೌಂಡ್‌ಗೆ ಗುದ್ದಿದ ಘಟನೆ ಮೇ.18 ರಂದು ನಡೆದಿದೆ.

ಸುಳ್ಯದಿಂದ ಪುತ್ತೂರಿಗೆ ಬರುತ್ತಿದ್ದ ಓಮ್ನಿ ಕಾರು ಶೇಖಮಲೆ ಮಸೀದಿ ಬಳಿ ಓವರ್‌ಟೇಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಶೇಖಮಲೆ ಮಸೀದಿಯ ಕೌಂಪೌಂಡ್‌ಗೆ ಗುದ್ದಿದೆ.

ಇನ್ನು ಗುದ್ದಿದ ರಭಸದಲ್ಲಿ ಓಮ್ನಿ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕೌಂಪೌಂಡ್ ಕುಸಿದು ಬಿದ್ದಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!