May 11, 2026

ಮಹಿಳೆಯಿಂದ ಉದ್ಯಮಿ ಮೇಲೆ ಹಲ್ಲೆ

0
image_editor_output_image-2030307104-1684299525850.jpg

ಬೆಂಗಳೂರು: ಫಾಲೋ ಮಾಡಿಕೊಂಡು ಬಂದು ನಡು ರಸ್ತೆಯಲ್ಲಿ ಥಳಿಸಿ ಲೇಡಿ ಡಾನ್ ಉದ್ಯಮಿ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅಖಿಲ್ ಅಲಿಯಾಸ್ ಹೇಮಾದ್ರಿ ಎಂಬ ಉದ್ಯಮಿ ಹಲ್ಲೆಗೊಳಗಾದ ವ್ಯಕ್ತಿ.

ಹಲ್ಲೆ ನಡೆಸಿದ ವ್ಯಕ್ತಿಗಳಲ್ಲಿ ಒಬ್ಬನಾದ ಆರೋಪಿ ರೋನಿತ್ ಕಾರು ಬ್ಯಸಿನೆಸ್ ವಿಚಾರದಲ್ಲಿ ಉದ್ಯಮಿಗೆ ವಂಚನೆ ಮಾಡಿದ್ದ. ಈ ಹಿನ್ನೆಲೆ ಅಖಿಲ್ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ರೋನಿತ್‌ನನ್ನು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ರೋನಿತ್ ಹೊರಗೆ ಬಂದಿದ್ದ.
ನಂತರ ಲೇಡಿ ಡಾನ್ ದುರ್ಗಾ ಅಲಿಯಾಸ್ ಸಹನಾ ಸೇರಿದಂತೆ ಐವರು ಸೇರಿ ಉದ್ಯಮಿ ಅಖಿಲ್ ಕಾರಿನಲ್ಲಿರುವಾಗಲೇ ಅವರ ಮೇಲೆ ಹಲ್ಲೆ ನಡೆಸಿ ಅವರ ಕಾರಿನ ಗ್ಲಾಸ್ ಒಡೆದು ಹಾಕಿದ್ದಾರೆ. ಬಳಿಕ ಅಖಿಲ್‌ಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಕುರಿತು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!