ಮಂಗಳೂರು: ತೋಟಬೆಂಗ್ರೆ ಜನರಲ್ ಸ್ಟೋರ್‌ಗೆ ಆಕಸ್ಮಿಕ ಬೆಂಕಿ: 8 ಲಕ್ಷ ರೂ. ನಷ್ಟ
ಮಂಗಳೂರು: ನಗರದ ತೋಟಬೆಂಗ್ರೆ ಪರಿಸರದಲ್ಲಿರುವ ಜನರಲ್ ಸ್ಟೋರ್‌ಗೆ ಸೋಮವಾರ ತಡರಾತ್ರಿ ಆಕಸ್ಮಿಕ ಬೆಂಕಿ ಹಿಡಿದು ಅಪಾರ ನಷ್ಟ ಸಂಭವಿಸಿದೆ.
8 ಲಕ್ಷ ಮೌಲ್ಯದ ಸಾಮಾನುಗಳು ಸುಟ್ಟ ಹೋಗಿದೆ. ಅಂಗಡಿ ಮಾಲಿಕನಿಗೆ ಭಾರಿ ನಷ್ಟ ಉಂಟಾಗಿದೆ.
ಸರಿಸುಮಾರು 2 ಘಂಟೆ ರಾತ್ರಿಗೆ ಜನರಲ್ ಸ್ಟೋರ್ ನಲ್ಲಿ ಬೆಂಕಿ ಕಾಣಿಸಿದ್ದು, ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಕದ್ರಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರಲ್ಲದೇ ತಾವೇ ಸ್ವತಃ ಬೆಂಕಿ ನಂದಿಸುವ ಎಲ್ಲಾ ಪ್ರಯತ್ನ ಮಾಡಿದ್ದಾರೆ.
ಬಳಿಕ ಬಂದ ಕದ್ರಿ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿ ಸೇರಿ ಬೆಂಕಿ ನಂದಿಸಿದ್ದಾರೆ.
ಅಷ್ಟರಲ್ಲಾಗಲೇ ಅಂಗಡಿಯ ಸಾಮಾನು ಸಂಪೂರ್ಣ ಸುಟ್ಟು ಕರಕಲಾಗಿದೆ.




