August 15, 2026

ಪತಿಯನ್ನು ಕೊಂದ ಖುಷಿಯಲ್ಲಿ ಸ್ನೇಹಿತರಿಗೆ ಪಾರ್ಟಿ ಕೊಟ್ಟಿದ್ದ ಪತ್ನಿ

0
image_editor_output_image45924927-1684129169993.jpg

ವಾಷಿಂಗ್ಟನ್: ಪತಿಯನ್ನು ಕೊಂದು ಸ್ನೇಹಿತರಿಗೆ ಪಾರ್ಟಿ ಕೊಟ್ಟಿದ್ದ ಕಿಲ್ಲರ್ ಲೇಡಿಯನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.

ಮೂಲಗಳ ಪ್ರಕಾರ, ತನ್ನ ಪತಿ ಎರಿಕ್ ರಿಚಿನ್ಸ್ ಸಾವಿನ ಮರುದಿನವೇ ಪತ್ನಿ ಮನೆಗೆ ಬೀಗ ಜಡಿದು, ದೊಡ್ಡ ಪಾರ್ಟಿ ಆಯೋಜಿಸಿ ಸ್ನೇಹಿತರನ್ನು (Friends Party) ಕರೆದಿದ್ದಳು. ತಾನೂ ಚೆನ್ನಾಗಿ ಕುಡಿದು ಕುಣಿದು ಕುಪ್ಪಳಿಸಿದ್ದಳು.

2022ರ ಮಾರ್ಚ್ 4ರಂದು ಕಾಮಾಸ್ ವಿಲ್ಲೋ ಕೋರ್ಟ್ನಲ್ಲಿರುವ ತನ್ನ ಮನೆಯಲ್ಲಿ ಪತಿ ಎರಿಕ್ ರಿಚಿನ್ಸ್‌ ವಿಷ ನೀಡಿ ಕೊಂದಿರುವ ಆರೋಪದ ಮೇಲೆ ಪತ್ನಿ ರಿಚಿನ್ಸ್ನನ್ನು ಕಳೆದವಾರ ಬಂಧಿಸಲಾಗಿತ್ತು.

ಪತಿ ಸತ್ತ ಒಂದು ವರ್ಷದ ನಂತರ ?ಆರ್ ಯು ವಿತ್ ಮಿ?’ ಎಂಬ ಮಕ್ಕಳ ಪುಸ್ತಕವನ್ನೂ ಈಕೆ ಪ್ರಕಟಿಸಿದ್ದಳು. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ಆಗುವ ಕಷ್ಟದ ಅನುಭವವನ್ನು ಸರಳವಾಗಿ ಮಕ್ಕಳಿಗೆ ತಿಳಿಸುವುದು. ಈ ಪುಸ್ತಕದ ಉದ್ದೇಶವಾಗಿತ್ತು.

ಪೊಲೀಸರು ಸಾವಿನ ಕುರಿತು ವಿಚಾರಣೆ ನಡೆಸಿದಾಗ ಮೊದಲು ಉಲ್ಟಾ ಹೊಡೆದಿದ್ದ ಈಕೆ ನಂತರ ಪಾರ್ಟಿ ವೇಳೆ ವೋಡ್ಕಾ ಮಿಶ್ರಿತ ಪಾನೀಯಾ ಬೆರಸಿ ಕೊಟ್ಟಿದ್ದೆ ಎಂದು ಹೇಳಿದ್ದಳು.

Leave a Reply

Your email address will not be published. Required fields are marked *

You may have missed

error: Content is protected !!