March 24, 2026

ಬೆಳ್ತಂಗಡಿ: ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಉದ್ಯಮಿ ವಿರುದ್ದ ದೂರು

0
allwyn_151221_belps.jpg

ಬೆಳ್ತಂಗಡಿ: ಕೆಲಸ ಕೊಡಿಸುವ ನೆಪದಲ್ಲಿ ವಿವಾಹಿತ ಮಹಿಳೆಯನ್ನು ಕಿಡ್ನಾಪ್ ಮಾಡಿ ಹಾಗೂ ಕಾರಿನಲ್ಲೇ ಲೈಂಗಿಕ ಕಿರುಕುಳ ನೀಡಿದಂತ ಆರೋಪದ ಉದ್ಯಮಿಯೋರ್ವನ ವಿರುದ್ದ ದೂರು ದಾಖಲಾಗಿದೆ.

ಸಂತ್ರಸ್ತೆ ನೀಡಿದಂತ ದೂರಿನ ಮೇಲೆ, ಮಹಾವೀರ ಟೆಕ್ಸ್ ಟೈಲ್ ಹಾಗೂ ಮಹಾವೀರ ಸೂಪರ್ ಮಾರ್ಕೆಟ್ ಮಾಲೀಕ ಉದ್ಯಮಿ ಪ್ರಭಾಕರ ಹೆಗ್ಡೆ ವಿರುದ್ದ ಎಫ್ಐಆರ್ ದಾಖಲಾಗಿದೆ.

ಸಂತ್ರಸ್ತ ಮಹಿಳೆ ಪತಿಯ ಜೊತೆಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ತೆರಳಿ, ಉದ್ಯಮಿ ಪ್ರಭಾಕರ ಹೆಗ್ಡೆ ವಿರುದ್ಧ ದೂರು ದಾಖಲಿಸಿದ್ದಾರೆ

ತನ್ನ ಸೂಪರ್ ಮಾರ್ಕೇಟ್​ನ ಬಿಲ್ಲಿಂಗ್ ತೋರಿಸೋದಾಗಿ ಕಾರಿನಲ್ಲಿ ಕರೆದೊಯ್ದಾಗ ಕಿರುಕುಳ ನೀಡಿದ್ದು ಈ ವೇಳೆ ಕಿರುಚಾಡಿ ಕಾರಿನಿಂದ ಹೊರಬಂದಿದ್ದಾರೆ. ಬೈಕ್​ನಲ್ಲಿ ಬಂದ ಯುವಕರು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ

ಸಂತ್ರಸ್ತ ಮಹಿಳೆಯಿಂದ ಲೈಂಗಿಕ ಕಿರುಕುಳದ ದೂರು ದಾಖಲಾಗುತ್ತಿದ್ದಂತೆ, ಉದ್ಯಮಿ ಪ್ರಭಾಕರ ಹೆಗ್ಡೆ ನಾಪತ್ತೆಯಾಗಿದ್ದಾರೆ. ಇದೀಗ ದೂರಿನ ಮೇಲೆ ಎಫ್ಐಆರ್ ದಾಖಲಿಸಿಕೊಂಡಿರುವಂತ ಬೆಳ್ತಂಗಡಿ ಪೊಲೀಸರು, ಉದ್ಯಮಿ ಪ್ರಭಾಕರ ಹೆಗ್ಡೆ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!