August 15, 2026

ಮಂಗಳೂರು: ಮೊಬೈಲ್ ಟವರ್‌ನಲ್ಲಿ ಕಾಣಿಸಿಕೊಂಡ ಬೆಂಕಿ: ಟವರ್ ಸಂಪೂರ್ಣ ಸುಟ್ಟು ಭಸ್ಮ

0
IMG-20230514-WA0022.jpg

ಮಂಗಳೂರು: ಮಂಗಳೂರು ನಗರದ ಬಂದರು ಪ್ರದೇಶದಲ್ಲಿ ಮೊಬೈಲ್ ಟವರ್ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ಮೊಬೈಲ್ ಟವರ್ ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಘಟನೆ ನಡೆದಿದೆ.

ಖಾಸಗಿ ಸ್ಥಳಲ್ಲಿರುವ ಬಹುಮಹಡಿ ಕಟ್ಟಡ ವೊಂದರ ಎರಡನೇ ಮಹಡಿಯಲ್ಲಿ ಬಿ.ಎಸ್.ಎನ್.ಎಲ್ ಹಾಗೂ ಜೀಯೊ ಮೊಬೈಲ್ ಟವರ್ ಗಳಿದ್ದು ಮಧ್ಯಾಹ್ನ ಎರಡುವರೆ ಗಂಟೆ ವೇಳೆಗೆ ಬಿ.ಎಸ್.ಎನ್.ಎಲ್ ಟವರ್‌ ನಲ್ಲಿ ದಿಢೀರನೆ ಬೆಂಕಿ ಕಾಣಿಸಿ ಕೊಂಡಿದೆ.

ಇನ್ನು ಈ ಬಗ್ಗೆ ಸ್ಥಳೀಯರು ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ತೆರಳಿದ ಅಗ್ನಿಶಾಮದಳದ ಸಿಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರೆ ಅಷ್ಟರಲ್ಲಿ ಬಿಎಸ್‌ ಎನ್‌ ಎಲ್‌ ಟವರ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!