ಕಣ್ಣೂರು: ಬೇಡವೆಂದರೂ ಪಪ್ಪಾಯ ಕೀಳಲು ಮುಂದಾದ ಅತ್ತೆಯನ್ನು ಚಾಕುವಿನಿಂದ ಇರಿದ ಸೊಸೆ
ಕೇರಳ: ಬೇಡ ಎಂದರೂ ಪಪ್ಪಾಯ ಕೀಳಲು ಮುಂದಾದ ಅತ್ತೆಯ ವರ್ತನೆಯಿಂದ ಕುಪಿತಗೊಂಡ ಸೊಸೆ ಆಕೆಯನ್ನು ಚಾಕುವಿನಿಂದ ಇರಿದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಕಣ್ಣೂರಿನ ಚೆರುಕುಣ್ಣು ನಗರದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ಸಂಜೆ ಮನೆಯ ಹಿಂದಿನ ತೋಟದಲ್ಲಿ ಬೆಳೆದಿದ್ದ ಪಪ್ಪಾಯ ಕೀಳಲು ಹೋದ ಅತ್ತೆಗೆ ಸೊಸೆ ವಿರೋಧಿಸಿದ್ದಾಳೆ. ಆದರೂ ಕೂಡ ಆಕೆಯ ಮಾತನ್ನು ನಿರ್ಲಕ್ಷಿಸಿದ ಅತ್ತೆ ಪಪ್ಪಾಯಕ್ಕೆ ಕೈ ಹಾಕಿದ್ದಾಳೆ
ಈ ವೇಳೆ ಸಿಟ್ಟಿಗೆದ್ದ ಸೊಸೆ ಜೋರಾಗಿ ಚಾಕುವಿನಿಂದ ಅತ್ತೆಯತ್ತ ಬೀಸಿದ್ದಾಳೆ. ಚಾಕು ಅತ್ತೆಯ ಕುತ್ತಿಗೆಗೆ ಗುರಿ ಇಟ್ಟಿದ್ದು, ತಪ್ಪಿ ಆಕೆಯ ಬಲಗೈಗೆ ಬಿದ್ದಿದೆ. ಬಲಗೈ ಸೀಳಿದಿದ್ದು, ಸದ್ಯ ಗಂಭೀರವಾದ ಗಾಯವಾಗಿಲ್ಲ.
ಇನ್ನು ಹಲ್ಲೆ ನಡೆಸಿದ ಸೊಸೆಯನ್ನು 33 ವರ್ಷದ ಸಿಂಧು ಎಂದು ಗುರುತಿಸಲಾಗಿದ್ದು, 67 ವರ್ಷದ ಸರೋಜಿನಿ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಸಂಬಂಧ ಕಣ್ಣೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ವೇಳೆ ಅತ್ತೆ ಮತ್ತು ಸೊಸೆ ನಡುವೆ ಸದಾ ವಾಗ್ವಾದ ನಡೆಯುತ್ತಿತ್ತು ಎಂಬುದು ತಿಳಿದು ಬಂದಿದ್ದು, ಸೊಸೆ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಈ ಘಟನೆ ಸಂಬಂಧ ಕಣ್ಣೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ವೇಳೆ ಅತ್ತೆ ಮತ್ತು ಸೊಸೆ ನಡುವೆ ಸದಾ ವಾಗ್ವಾದ ನಡೆಯುತ್ತಿತ್ತು ಎಂಬುದು ತಿಳಿದು ಬಂದಿದ್ದು, ಸೊಸೆ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.