August 15, 2026

ಉಡುಪಿ: ಕಾಂಕ್ರೀಟ್ ಮಿಕ್ಸರ್ ಲಾರಿಗೆ ಖಾಸಗಿ ಬಸ್ ಢಿಕ್ಕಿ: ಅನೇಕ ಪ್ರಯಾಣಿಕರಿಗೆ ಗಾಯ

0
IMG-20230514-WA0015.jpg

ಉಡುಪಿ: ನಗರದ ಕುಂಜಿಬೆಟ್ಟು ಬಳಿ ಖಾಸಗಿ ಬಸ್ಸೊಂದು ಕಾಂಕ್ರೀಟ್ ಮಿಕ್ಸರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಕಲ್ಸಂಕ ಕಡೆಯಿಂದ ಬರುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿಯೊಂದು ಕುಂಜಿಬೆಟ್ಟು ಎಂಬಲ್ಲಿ ತಿರುವು ಪಡೆಯಲು ಯತ್ನಿಸಿದಾಗ ಮಣಿಪಾಲದಿಂದ ಉಡುಪಿಗೆ ತೆರಳುತ್ತಿದ್ದ ವೋಲ್ವೋ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ.

ಢಿಕ್ಕಿಯಯ ರಭಸಕ್ಕೆ ಕಾಂಕ್ರೀಟ್ ರಸ್ತೆಯ ಮೇಲೆ ಚೆಲ್ಲಿದ್ದು, ಎರಡೂ ವಾಹನಗಳಿಗೆ ಹಾನಿಯಾಗಿದ್ದು, ಗಾಯಗೊಂಡ ಬಸ್ ಪ್ರಯಾಣಿಕರನ್ನು ಬಸ್‌ನ ತುರ್ತು ನಿರ್ಗಮನದ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

Leave a Reply

Your email address will not be published. Required fields are marked *

You may have missed

error: Content is protected !!