August 15, 2026

ಪುತ್ತೂರು : ಗೆಲುವಿನ ನಗೆ ಬೀರಿದ ಅಶೋಕ್ ಕುಮಾರ್ ರೈ: ವಿಜಯೋತ್ಸವದ ನಡುವೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಚರ್ಚ್, ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ

0
IMG-20230514-WA0010.jpg

ಪುತ್ತೂರು : ಚುನಾವಣೆಯಲ್ಲಿ ವಿಜೇತರಾದ ಬಳಿಕ ಅಶೋಕ್ ಕುಮಾರ್ ರೈ ಅವರು ವಿಜಯೋತ್ಸವದ ನಡುವೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದರು ಮತ್ತು ತಿಂಗಳೊಳಗೆ ಶತರುದ್ರ ಸೇವೆ ಸಂಕಲ್ಪ ಮಾಡಿಕೊಂಡರು.

ಸಂಜೆ ಕಬಕದಿಂದ ವಿಜಯೋತ್ಸವದ ಮೂಲಕ ಆಗಮಿಸಿದ ಅವರು ಎಪಿಎಂಸಿ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ತೆರಳಿ ಅಲ್ಲಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.

ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರು ಹಾರಾರ್ಪಣೆ ಮಾಡಿ ಅವರನ್ನು ಬರಮಾಡಿಕೊಂಡರು. ದೇವಳದ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಮಾಡಿದರು.

ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಪ್ರಾರ್ಥನೆ ಮಾಡಿದರು.

ಈ ವೇಳೆ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್‌ ನಾರಾವಿ ಶಲ್ಯ ಹಾಕಿ ಗೌರವಿಸಿದರು. ಮಾಜಿ ಆಡಳಿತ ಮೊಕ್ತೇಸರರಾದ ಎನ್.ಕೆ. ಜಗನ್ನಿವಾಸ್ ರಾವ್ ಹಾರಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ರೈ ಅವರ ಪತ್ನಿ ಸುಮಾ ಅಶೋಕ್ ರೈ, ಪುತ್ರ ಪ್ರದಿಲ್ ರೈ, ಸಹೋದರಿ ನಳಿನಿ ಪಿ ಶೆಟ್ಟಿ, ಅಳಿಯ ನಿಹಾಲ್ ಪಿ ಶೆಟ್ಟಿ, ಸಹೋದರರಾದ ಸುಬ್ರಹ್ಮಣ್ಯ ರೈ, ರಾಜಕುಮಾರ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ, ಹೇಮನಾಥ್ ಶೆಟ್ಟಿ ಕಾವು, ಅನಿತಾ ಹೇಮನಾಥ ಶೆಟ್ಟಿ, ನಿರ್ಮಲ್ ಕುಮಾರ್ ಜೈನ್, ಶ್ರೀರಾಮ ಪಕ್ಕಳ, ಪ್ರಮೋದ್ ಕುಮಾರ್ ರೈ, ವಿಜಯ ಕುಮಾರ್ ಸೊರಕೆ, ಯೋಗೀಶ್ ಸಾಮಾನಿ, ಮಹಾಬಲ ರೈ ವಳತ್ತಡ್ಕ, ಜೋಕಿಂ ಡಿ ಸೋಜ, ಇಸಾಕ್ ಸಾಲ್ಮರ, ಸೀತಾರಾಮ ಕೊಡ್ನೀರು, ವೇದನಾಥ ಸುವರ್ಣ, ಶಿವರಾಮ್ ಆಳ್ವ,ಪ್ರಸಾದ್ ಪಾಣಾಜೆ, ಮೋನಪ್ಪ ಪೂಜಾರಿ, ಮಹೇಶ್ ರೈ ಅಂಕೊತ್ತಿಮಾರ, ಉದ್ಯಮಿ
ಸುದೇಶ್‌ ಶೆಟ್ಟಿ ಶಾಂತಿನಗರ, ತಾಲೂಕು ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಲ್ಯಾನ್ಸಿ ಮಸ್ಕರೇನ್ಹಸ್, ರಮೇಶ್ ರೈ ಡಿಂಬ್ರಿ, ಎಂ.ಆರ್‌.ಜಯಕುಮಾರ್ ರೈ, ರವಿಪ್ರಸಾದ್ ಶೆಟ್ಟಿ ಬನ್ನೂರು, ನಯನಾ ರೈ ನೆಲ್ಲಿಕಟ್ಟೆ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮಚಂದ್ರ ಕಾಮತ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಅಶೋಕ್ ಕುಮಾರ್ ರೈ ಅವರು ಮಾಯಿದೆ ದೇವಸ್ ಚರ್ಚ್ ಮತ್ತು ಕೇಂದ್ರ ಜುಮಾ ಮಸೀದಿಗೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನೀ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!