ಮೂಡಬಿದಿರೆ: ವ್ಯಕ್ತಿಯ ಬರ್ಬರ ಹತ್ಯೆ:
ಮಂಗಳೂರು: ಮೂಡುಬಿದಿರೆಯ ಗಂಟಾಲ್‌ಕಟ್ಟೆ ಬಳಿ ವ್ಯಕ್ತಿಯೋರ್ವನನ್ನು ಆತನ ಬಾವನೇ (ಅಕ್ಕನ ಗಂಡ) ಬರ್ಬರವಾಗಿ ಕೊಲೆಗೈದಿದ್ದಾನೆ.
ಚಿಕ್ಕಮಗಳೂರಿನ ನಿವಾಸಿ ಮಹಮ್ಮದ್ ಜಮಾಲ್ (43) ಕೊಲೆಯಾದ ವ್ಯಕ್ತಿ. ಮಹಮ್ಮದ್ ಶಾಹಿಬ್ ಕೊಲೆ ಆರೋಪಿ. ಮಹಮ್ಮದ್ ಶಾಹಿಬ್‌ನ ಅಕ್ಕನನ್ನು ಮಹಮ್ಮದ್ ಜಮಾಲ್‌ಗೆ ಮದುವೆ ಮಾಡಿಕೊಡಲಾಗಿತ್ತು. ಕೌಟುಂಬಿಕ ದ್ವೇಷಕ್ಕಾಗಿ ಈ ಕೊಲೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಧಾವಿಸಿದ್ದು, ಪ್ರಕರಣ ದಾಖಲಾಗಿದೆ.
ಜಮಾಲ್ ಗುಜರಿ ವ್ಯಾಪಾರ ಮಾಡುತ್ತಿದ್ದ. ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ.





