ಬಾವಿಯಲ್ಲಿ ತಾಯಿ, ಮಗುವಿನ ಮೃತದೇಹ ಪತ್ತೆ
ಕಲ್ಲೀಕೋಟೆ: ತಾಯಿ ಹಾಗೂ ಒಂದೂವರೆ ವರ್ಷದ ಮಗುವಿನ ಮೃತದೇಹ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಕೇರಳದ ಕಲ್ಲೀಕೋಟೆಯ ಚೆಮಂಚೇರಿಯಲ್ಲಿ ನಡೆದಿದೆ.
ಮೃತರನ್ನು ಚೇಮಂಚೇರಿ ತುವಕೋಡ್ ಅಂಚೆ ಕಚೇರಿ ಬಳಿಯ ಮಾವಿಳ್ಳಿ ಪ್ರಜಿತ್ ಅವರ ಪತ್ನಿ ಧನ್ಯ (35) ಮತ್ತು ಪುತ್ರಿ ತೀರ್ಥ ಎಂದು ಗುರುತಿಸಲಾಗಿದೆ.
ಬುಧವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಬಾವಿಯಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮೃತದೇಹಗಳನ್ನು ಮೇಲೆತ್ತಿದ್ದಾರೆ.




