March 16, 2026

ದ.ಕ. ಜಿಲ್ಲೆಯಲ್ಲಿ ಮತದಾನ ಮಾಡದೇ ಇರುವವರು ಎಷ್ಟು ಲಕ್ಷ ಮಂದಿ ಗೊತ್ತೇ?

0
image_editor_output_image820767241-1683783516302.jpg

ಮಂಗಳೂರು: ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳಿಗೆ ಬುಧವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ವರೆಗೆ ಶೇ.68.10ರಷ್ಟು ಮತದಾನ ಆಗಿದ್ದು, ಮತದಾನ ಪ್ರಕ್ರಿಯೆಯು ಶಾಂತಿಯುತವಾಗಿ ಪೂರ್ಣಗೊಂಡಿದೆ.

ಜಿಲ್ಲಾ ಮಟ್ಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 75.87 ಮತದಾನವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 80.81 ಶೇಕಡಾ, ಅತೀ ಕಡಿಮೆ ಅಂದರೆ ಬೆಂಗಳೂರು ನಗರದಲ್ಲಿ 53.08 ಶೇಕಡಾ ಮತದಾನವಾಗಿದೆ.

ಇನ್ನುಳಿದಂತೆ ದಕ್ಷಿಣ ಕನ್ನಡ 8 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ಪ್ರಕ್ರಿಯೆಯು ಶಾಂತಿಯುತವಾಗಿ ನಡೆದಿದೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನ ನಡೆದಿದ್ದರೆ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನ ನಡೆದಿದೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ 80.33%, ಬಂಟ್ವಾಳ ಕ್ಷೇತ್ರದಲ್ಲಿ 80.27%, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 79.91%, ಸುಳ್ಯ 78.53 %, ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ 77.38%, ಮೂಡುಬಿದ್ರೆ 76%, ಮಂಗಳೂರು ಉತ್ತರ(ಸುರತ್ಕಲ್‌) 71.6%, ಮಂಗಳೂರು ದಕ್ಷಿಣ(ನಗರ) 64.89% ಮತದಾನ ನಡೆದಿದೆ.

ದ.ಕ ಜಿಲ್ಲೆಯಲ್ಲಿ ಒಟ್ಟು 4, 29, 807 ಮಂದಿ ಮತದಾನದಿಂದ ದೂರ ಉಳಿದಿದ್ದಾರೆ.

Leave a Reply

Your email address will not be published. Required fields are marked *

error: Content is protected !!