January 31, 2026

ಮಂಗಳೂರು: ಖಾಸಗಿ ವೀಡಿಯೋ ವೈರಲ್‌ ಬೆದರಿಕೆ: 96,450 ರೂ. ವರ್ಗಾಯಿಸಿಕೊಂಡು ವಂಚನೆ

0
IMG-20230213-WA0008.jpg

ಮಂಗಳೂರು: ಖಾಸಗಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡುವುದಾಗಿ ಬೆದರಿಸಿ, 96,450 ರೂ. ವರ್ಗಾಯಿಸಿಕೊಂಡಿರುವ ಕುರಿತಂತೆ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರಿಗೆ ಆನ್‌ಲೈನ್‌ ಡೇಟಿಂಗ್‌ ಸೈಟ್‌ ಒಂದರಲ್ಲಿ ನಿಶಾ ಅಗರ್ವಾಲ್‌ ಎಂಬಾಕೆಯ ಪರಿಚಯವಾಗಿದ್ದು, ಆಕೆ ತನ್ನ ವಾಟ್ಸಾ ಪ್‌ ಸಂಖ್ಯೆಯನ್ನು ನೀಡಿದ್ದು, ಬಳಿಕ ಅದರಲ್ಲಿ ಆಕೆಯೊಂದಿಗೆ ಸಂಪರ್ಕದಲ್ಲಿದ್ದರು. ಬಳಿಕ ಆಕೆ ವೀಡಿಯೋ ಕರೆ ಮಾಡಿ, ತನ್ನ ಅಶ್ಲೀಲ ವೀಡಿಯೋವನ್ನು ತೋರಿಸಿದ್ದು, ದೂರದಾರಿಗೂ ಆದೇ ರೀತಿ ತೋರಿಸುವಂತೆ ತಿಳಿಸಿದ್ದಾಳೆ. ಆಕೆ ಹೇಳಿದಂತೆ ಮಾಡಿದ್ದಾರೆ.

ಯುವತಿಯು ಬಳಿಕ ದೂರುದಾರರಿಗೆ ಕರೆ ಮಾಡಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡುವುದಾಗಿ ಬೆದರಿಸಿ ಹಣದ ಬೇಡಿಕೆ ಇಟ್ಟಿದ್ದಾಳೆ.

ಇನ್ನು ಮೊದಲಿಗೆ 15,000 ರೂ. ಆಕೆಗೆ ವರ್ಗಾಯಿಸಿದ್ದಾರೆ. ಮೇ 2ರಂದು ವ್ಯಕ್ತಿಯೊಬ್ಬ ಕರೆ ಮಾಡಿ ತನ್ನ ಹೆಸರು ಪ್ರಮೋದ್‌ ರಾಥೋಡ್‌, ದಿಲ್ಲಿ ಪೊಲೀಸ್‌ ಸೈಬರ್‌ ಸೆಲ್‌ನಿಂದ ಮಾತನಾಡುತ್ತಿದ್ದು, ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾನೆ. ಬಳಿಕ ಸಂಜಯ್‌ ಸಿಂಗ್‌ ಎಂಬಾತ, ಯೂಟ್ಯೂಬ್‌ ಕಸ್ಟಮರ್‌ ಕೇರ್‌ನಿಂದ ಕರೆ ಮಾಡುತ್ತಿದ್ದು, ಅಶ್ಲೀಲ ವೀಡಿಯೋ ಡಿಲೀಟ್‌ ಮಾಡುವುದಾಗಿ ನಂಬಿಸಿ ಹಂತ ಹಂತವಾಗಿ ಒಟ್ಟು ರೂ. 96,450 ರೂ.ವನ್ನು ತನ್ನ ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!