March 24, 2026

ರೀಲ್ಸ್‌ ಮಾಡುವಾಗ ರೈಲು ಡಿಕ್ಕಿ: ಯುವಕ ಸ್ಥಳದಲ್ಲೇ ಮೃತ್ಯು

0
IMG-20230506-WA0028.jpg

ಹೈದರಾಬಾದ್: ಹೈದರಾಬಾದ್‌‌ನಲ್ಲಿ ರೈಲ್ವೇ ಹಳಿ ಮೇಲೆ ವಿಡಿಯೋ ಚಿತ್ರೀಕರಣ ಮಾಡುವಾಗ ರೈಲಿಗೆ ಡಿಕ್ಕಿ ಹೊಡೆದು ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತನನ್ನು ಇಲ್ಲಿನ ಹಮತ್ ನಗರದ ಶ್ರೀರಾಮನಗರದ ಮೊಹಮ್ಮದ್ ಸಾದಿಕ್ ಎಂಬುವರ ಪುತ್ರ ಮೊಹಮ್ಮದ್ ಸರ್ಫರಾಜ್ (16) ಎಂದು ಗುರುತಿಸಲಾಗಿದೆ.

ಯುವಕ ಮದರಸಾದಲ್ಲಿ ಇಸ್ಲಾಮಿಕ್ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದು, ಇನ್‌ಸ್ಟಾಗ್ರಾಮ್ ಖಾತೆಯನ್ನು ಹೊಂದಿರುವ ಸರ್ಫರಾಜ್ ಮದ್ರಸಾ ಸ್ನೇಹಿತರಾದ ಮೊಹಮ್ಮದ್ ಮತ್ತು ಅಂಜದ್ ಅವರೊಂದಿಗೆ ರೈಲ್ವೇ ಟ್ರ್ಯಾಕ್‌ ಮೇಲೆ ಇನ್‌ಸ್ಟಾಗ್ರಾಮ್ ರೀಲ್ಸ್‌ ಮಾಡಲು ಸನತ್‌ನಗರ ರೈಲು ನಿಲ್ದಾಣದ ಬಳಿಯ ರೈಲ್ವೆ ಹಳಿ ಹೋಗಿದ್ದಾರೆ.

ಇನ್ನು ಫೋನ್‌ನಲ್ಲಿ ಚಿತ್ರೀಕರಣ ಮಾಡುವಾಗ ಎಂಎಂಟಿಎಸ್ ರೈಲಿನ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ ಲಿಂಗಂಪಲ್ಲಿಯಿಂದ ಸನತ್‌ನಗರಕ್ಕೆ ಫತೇನಗರ ಕಡೆಗೆ ಹೋಗುತ್ತಿದ್ದ ಎಂಎಂಟಿಎಸ್ ರೈಲು ಡಿಕ್ಕಿ ಹೊಡೆದಿದ್ದು, ಈ ಅಪಘಾತದಲ್ಲಿ ಸರ್ಫರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Leave a Reply

Your email address will not be published. Required fields are marked *

error: Content is protected !!