ಕುಡಿದ ಮತ್ತಿನಲ್ಲಿ ಪೊಲೀಸರು ಕುಸ್ತಿಪಟುಗಳ ವಿರುದ್ಧ ನಿಂದನೆ ಅರೋಪ:
ಇಂತಹ ದಿನಗಳನ್ನು ನೋಡೋದಕ್ಕಾ ನಾವು ಪದಕಗಳನ್ನು ಗೆದ್ದಿದ್ದು: ವಿನೇಶ್ ಪೋಗಟ್
ದೆಹಲಿ: ಜಂತರ್ ಮಂತರ್ ನಲ್ಲಿ ದೆಹಲಿ ಪೊಲೀಸರು ಮತ್ತು ಕುಸ್ತಿಪಟುಗಳ ನಡುವೆ ವಾಗ್ವಾದ ನಡೆದಿದ್ದು, ಪೊಲೀಸರು ಈ ವೇಳೆ ಕುಡಿದ ಮತ್ತಿನಲ್ಲಿ ಮಹಿಳಾ ಕುಸ್ತಿಪಟುಗಳ ಮೇಲೆ ಪೊಲೀಸ್ ಪೇದೆಯೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಕುಸ್ತಿಪಟುಗಳು ಕಣ್ಣೀರಿಟ್ಟರು.
ಈ ವಿಷಯದ ಬಗ್ಗೆ ವಿನೇಶ್ ಫೋಗಟ್ ಕಣ್ಣೀರಾಕಿದ್ದಾರೆ. ದೆಹಲಿ ಪೊಲೀಸರು ನಮ್ಮೊಂದಿಗೆ ನಡೆದುಕೊಂಡ ರೀತಿ ದುಃಖಕರವಾಗಿದೆ. ನಾವು ಅಪರಾಧಿಗಳಲ್ಲ, ಇಂತಹ ದಿನಗಳನ್ನು ನೋಡೋದಕ್ಕಾ ನಾವು ಪದಕಗಳನ್ನು ಗೆದ್ದಿದ್ದು, ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕು ಪದಕಗಳನ್ನು ಗೆದ್ದಿದ್ದಕ್ಕಾಗಿ ನಾವು ತಪ್ಪಿತಸ್ಥರೇ? ನನ್ನ ಎಲ್ಲಾ ಪದಕಗಳನ್ನು ಸರ್ಕಾರ ಹಿಂಪಡೆಯುವಂತೆ ನಾನು ವಿನಂತಿಸುತ್ತೇನೆ. ನಮ್ಮನ್ನು ಸಾಯಿಸುವುದಾದರೆ ಸಾಯಿಸಿಬಿಡಿ, ಎಂದು ಕಣ್ಣೀರು ಹಾಕಿದರು. ಕುಡಿತದ ಅಮಲಿನಲ್ಲಿ ಪೊಲೀಸರು ಮಹಿಳೆಯರೆಂಬುದನ್ನೂ ನೋಡದೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜಂತರ್ ಮಂತರ್‌ನಲ್ಲಿ ಮಳೆಯಿಂದಾಗಿ ನಮ್ಮ ಹಾಸಿಗೆಗಳು ಒದ್ದೆಯಾಗಿದ್ದು, ಅವುಗಳನ್ನು ಜಾಗಕ್ಕೆ ಬೇರೆ ಹಾಸಿಗೆಗಳನ್ನು ಹಾಕಲು ಪೊಲೀಸರು ನಮಗೆ ಅವಕಾಶ ನೀಡಲಿಲ್ಲ. ಈ ವೇಳೆ ಪೊಲೀಸರು ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದರು. ಪೊಲೀಸರ ವರ್ತನೆಯಿಂದ ಇಬ್ಬರು ಕ್ರೀಡಾಪಟುಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಮಹಿಳೆಯರಿರುವಲ್ಲಿ ಮಹಿಳಾ ಪೊಲೀಸರು ಇಲ್ಲದಿರುವುದನ್ನು ಫೋಗಟ್ ಪ್ರಶ್ನಿಸಿದರು.