March 16, 2026

ವಿದ್ಯಾರ್ಥಿನಿಯರ ಮಲಗುವ ಕೊಠಡಿ, ಬಾತ್‌ರೂಮ್‌ನಲ್ಲಿ ಸ್ಪೈಕ್ಯಾಮೆರಾ ಪತ್ತೆ: ಆರೋಪಿಯ ಬಂಧನ

0
image_editor_output_image1604165805-1683090743374.jpg

ಜೈಪುರ: ರಾಜಸ್ಥಾನದ ಉದಯಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಈ ನಗರದಲ್ಲಿ ಯುವತಿಯರು ವಾಸವಿದ್ದ ಬಾಡಿಗೆ ಫ್ಲ್ಯಾಟ್‌ನಲ್ಲಿ ಸ್ಪೈ ಕ್ಯಾಮೆರಾಗಳು ಪತ್ತೆಯಾಗಿವೆ.

ಈ ಕ್ಯಾಮೆರಾಗಳನ್ನು ಸ್ನಾನಗೃಹ, ಮಲಗುವ ಕೋಣೆಗಳು ಮತ್ತು ಇತರ ಸ್ಥಳಗಳಲ್ಲಿ ಅಳವಡಿಸಲಾಗಿತ್ತು ಎಂಬುದು ತಿಳಿದುಬಂದಿದೆ. ಗ್ರಾಹಕರಿಗೆ ಮನೆಗಳನ್ನ ಬಾಡಿಗೆ ನೀಡುವ ಮುನ್ನ ಮಾಲೀಕರೇ ಅಳವಡಿಸಿದ್ದರು ಎಂಬುದು ಗಮನಾರ್ಹ.

ರಾಜಸ್ಥಾನದ ಉದಯಪುರದ ಪ್ರತಾಪನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್‌ ದಾಖಲಾಗಿದೆ. ಉದಯಪುರ ವಿಭಾಗದ ಅತಿದೊಡ್ಡ ಮೋಹನ್‌ಲಾಲ್ ಸುಖದಿಯಾ ವಿಶ್ವವಿದ್ಯಾಲಯವು ಈ ಪೊಲೀಸ್ ಠಾಣೆ ವೃತ್ತದಲ್ಲಿದೆ ಎಂಬುದು ಸಹ ಗಮನಿಸಬೇಕಾದ ಅಂಶ. ಬೋಹ್ರಾ ಗಣೇಶ್ ಪ್ರದೇಶವು ಈ ವಿಶ್ವವಿದ್ಯಾಲಯದ ಸಮೀಪದಲ್ಲಿದೆ.

ಈ ಪ್ರದೇಶದಲ್ಲಿ ನೂರಾರು ಯುವಕ-ಯುವತಿಯರು ಬಾಡಿಗೆಗೆ ಕೊಠಡಿ ಅಥವಾ ಫ್ಲ್ಯಾಟ್‌ಗಳನ್ನು ತೆಗೆದುಕೊಂಡು ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಈ ಪ್ರಕರಣ ಸಂಬಂಧ ರಾಜ್‌ಸಮಂದ್‌ನ ನಾಥದ್ವಾರ ನಿವಾಸಿ ರಾಜೇಂದ್ರ ಸೋನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!