July 6, 2026

ಮಾರ್ಚ್ ತಿಂಗಳಲ್ಲಿ 47 ಲಕ್ಷ ಭಾರತೀಯರ ವಾಟ್ಸಾಪ್ ಖಾತೆ ರದ್ದು

0
whatsapp_0-sixteen_nine.jpg

ನವದೆಹಲಿ: ಹಾನಿಕಾರಕ ಸಂದೇಶ ರವಾನೆ ಮಾಡಿದ ಆರೋಪದ ಮೇಲೆ ಮಾರ್ಚ್‍ ತಿಂಗಳಲ್ಲಿ 47 ಲಕ್ಷ ಭಾರತೀಯರ ವಾಟ್ಸ್‍ಆಪ್ ಖಾತೆಗಳನ್ನು ನಿಷೇಧಿಸಲಾಗಿದೆ.

ಫೆಬ್ರವರಿಯಲ್ಲಿ ಸುಮಾರು 4.6 ಮಿಲಿಯನ್ ಭಾರತೀಯರ ಖಾತೆಗಳನ್ನು ನಿಷೇಧಿಸಲಾಗಿದ್ದು, ಇದೀಗ ಮಾರ್ಚ್‍ನಲ್ಲಿ ಮತ್ತೆ 47 ಲಕ್ಷ ಭಾರತೀಯರ ಖಾತೆಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಇನ್ನು +91 ಫೋನ್ ಸಂಖ್ಯೆಯ ಮೂಲಕ ಭಾರತೀಯ ಖಾತೆಯನ್ನು ಗುರುತಿಸಲಾಗುತ್ತದೆ. ಮಾರ್ಚ್ 1, 2023 ಮತ್ತು 31 ಮಾರ್ಚ್ 2023 ರ ನಡುವೆ, 4,715,906 ವಾಟ್ಸ್‍ಆಪ್ ಖಾತೆಗಳನ್ನು ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!