February 3, 2026

ಚುನಾವಣಾ ಕರ್ತವ್ಯದ ಮೇಲೆ ಹೊರಟಿದ್ದ ಬಸ್ ಪಲ್ಟಿ: 15ಕ್ಕೂ ಅಧಿಕ ಮಂದಿಗೆ ಗಾಯ

0
image_editor_output_image-2057920301-1683014576010.jpg

ವಿಜಯಪುರ: ಚುನಾವಣಾ ಕರ್ತವ್ಯದ ಮೇಲೆ ಹೊರಟಿದ್ದ ಬಸ್ ಪಲ್ಟಿಯಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಳ್ಳೂರು ಕ್ರಾಸ್‌ನಲ್ಲಿ ನಡೆದಿದೆ.

ಬಸ್‌ನ ಎಕ್ಸಲ್ ಕಟ್ ಆದ ಹಿನ್ನೆಲೆ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಬಸ್‌ನಲ್ಲಿ 40 ಕ್ಕೂ ಅಧಿಕ ಪ್ರಯಾಣಿಕರಿದ್ದರು. ಅಪಘಾತದ ಹಿನ್ನೆಲೆ 15 ಕ್ಕೂ ಅಧಿಕ ಜನರಿಗೆ ಗಾಯಗಳಾಗಿವೆ. ತಕ್ಷಣ ಗಾಯಾಳುಗಳನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ.

ಸಿಂದಗಿ ವಿಧಾನಸಭಾ ಕ್ಷೇತ್ರದ ಮತಕೇಂದ್ರ ತರಬೇತಿಗೆ ಸಿಬ್ಬಂದಿಯನ್ನು ಬಸ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಸಿಂದಗಿಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಅಪಘಾತ ಸಂಭವಿಸಿದೆ.

Leave a Reply

Your email address will not be published. Required fields are marked *

error: Content is protected !!