ಕಾಸರಗೋಡು; ಸಾವಿನ ಬಗ್ಗೆ ಅನುಮಾನದ ಹಿನ್ನೆಲೆ ಅನಿವಾಸಿ ಉದ್ಯಮಿಯೋರ್ವರ ಮೃತದೇಹವನ್ನು ಧಪನ ಮಾಡಿದ ಖಬರಸ್ತಾನದಿಂದ ತೆಗೆದು ವಾಪಾಸ್ಸು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಪೂಚಕ್ಕಾಡ್ ನಿವಾಸಿ ಉದ್ಯಮಿ ಅಬ್ದುಲ್ ಗಪೂರ್ ಸಾವಿನಲ್ಲಿ ಅನುಮಾನ ಕಂಡು ಬಂದ ಹಿನ್ನೆಲೆ ಈ ಬೆಳವಣಿಗೆ ನಡೆದಿದೆ.
ಏ.13ರಂದು ಗಪೂರ್ ನಿಧನರಾಗಿದ್ದರು.ಅವರ ಅಂತ್ಯ ಸಂಸ್ಕಾರ ಏ.14ರಂದು ನಡೆದಿತ್ತು. ಅವರು ನಿಧನದ ದಿನ ಮನೆಯಲ್ಲಿ ಒಬ್ಬರೆ ಇದ್ದರು. ಇದೀಗ ಸಾವಿನಲ್ಲಿ ಅನುಮಾನ ಬಂದ ಹಿನ್ನೆಲೆ ಮರಣೋತ್ತರ ಪರೀಕ್ಷೆಗೆ ಪೂಚಕ್ಕಾಡ್ ಹೈದ್ರೋಸ್ ಮಸೀದಿಯ ದಫನ ಭೂಮಿಯಿಂದ ಹೊರ ತೆಗೆಯಲಾಗಿದೆ.
ಡಿವೈಎಸ್ಪಿ ಸುನೀಲ್ ಕುಮಾರ್ ನೇತೃತ್ವದಲ್ಲಿ ಮೃತದೇಹ ಹೊರತೆಗೆದು ಪರೀಕ್ಷೆ ಕಾರ್ಯ ನಡೆದಿದೆ.
ಆರಂಭದಲ್ಲಿ ಗಪೂರು ಅವರದ್ದು ಸಹಜ ಸಾವು ಎಂದು ಅಂತ್ಯ ಸಂಸ್ಕಾರ ನಡೆಸಲಾಗಿತ್ತು.ಆ ಬಳಿಕ ಅವರ ಮನೆಯಲ್ಲಿ 600 ಪವನ್ ಚಿನ್ನಾಭರಣ ನಾಪತ್ತೆಯಾಗಿರುವ ಹಿನ್ನೆಲೆ ಸಂಶಯ ವ್ಯಕ್ತಪಡಿಸಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.ನಾಪತ್ತೆಯಾದ ಚಿನ್ನಾಭರಣದ ಮೌಲ್ಯ ಬರೊಬ್ಬರಿ 2.85 ಕೋಟಿ ಎಂದು ಹೇಳಲಾಗಿದೆ.