March 24, 2026

ಕರ್ನಾಟಕ ದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ 140 ರಿಂದ 150 ಸ್ಥಾನದಲ್ಲಿ ಗೆಲ್ಲುವುದು ನಿಶ್ಚಿತ’: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್
 

0
ex-cm-jagadish-shettar-resigns-from-bjp-over-denial-of-ticket-for-ktaka-assembly-elections.jpg

ಕೊಪ್ಪಳ: ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ 140 ರಿಂದ 150 ಸ್ಥಾನದಲ್ಲಿ ಗೆಲ್ಲುವುದು ನಿಶ್ಚಿತ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ನಾನೇನು ಸ್ಥಾನಮಾನ ಕೇಳಿಲ್ಲ. ಬದಲಾಗಿ ಗೌರವದಿಂದ ನಡೆಸಿಕೊಳ್ಳಿ ಎಂದಿರುವೆ. ಅದರಂತೆ ಅವರು ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ ಜನಸಂಘದ ಕಾಲದಲ್ಲೂ ನಮ್ಮ ಕುಟುಂಬ ಇತ್ತು. ಆದರೆ ಅಲ್ಲಿ ಇತ್ತೀಚೆಗಿನ ಬೆಳವಣಿಗೆಗಳು ಸರಿ ಕಂಡಿಲ್ಲ. ಕೆಲವೇ ಕೆಲವರ ಕೈಯಲ್ಲಿ ಬಿಜೆಪಿ ಹಿಡಿತ ಬಂದಿದೆ ಎಂದರು.

ಇನ್ನು ನಾನು ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕೆ ಹೊರ ಬಂದಿದ್ದೇನೆ. ಸ್ವಾಭಿಮಾನಕ್ಕೆ ದಕ್ಕೆಯಾದಾಗಲೂ ಸುಮ್ಮನೆ ಇದ್ದರೆ ಅದು ಗುಲಾಮಗಿರಿಗೆ ಹೋದಂತೆ. ಆಗ ಅವರು ಇದ್ದರೂ ಸತ್ತಂತೆ. ಆ ಗುಲಾಮಗಿರಿಗೆ ಶೆಡ್ಡು ಹೊಡೆದು ಹೊರ ಬಂದಿರುವೆ. ಯಾರೂ ಗುಲಾಮಗಿರಿಗೆ ಒಳಗಾಗ ಬಾರದು. ಅವರಿಗೆ ಚಾಲೆಂಜ್ ಮಾಡಿ ನಾನು ಹೊರ ಬಂದಿರುವೆ. ಬಿಜೆಪಿ ಈಗ ನೈತಿಕತೆ ಕಳೆದುಕೊಂಡಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!