December 16, 2025

ಕಡಬ: ಚೆಕ್‌ಪೋಸ್ಟ್‌ನಲ್ಲಿ ಬ್ಯಾರಿಕೇಡ್‌ಗೆ ಢಿಕ್ಕಿ ಹೊಡೆದು ಪರಾರಿ: ವಾಹನವನ್ನು ವಶಕ್ಕೆಪಡೆದ ಪೊಲೀಸರು

0
image_editor_output_image646997979-1682923080281.jpg

ಕಡಬ: ಪೊಲೀಸ್‌ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರ ಸೂಚನೆಯನ್ನು ಲೆಕ್ಕಿಸದೆ ಪಿಕಪ್‌ ವಾಹನವೊಂದು ಬ್ಯಾರಿಕೇಡ್‌ಗೆ ಢಿಕ್ಕಿ ಹೊಡೆದು ಪರಾರಿಯಾದ ಘಟನೆ ರಾಮಕುಂಜ ಬಳಿ ಮುಖ್ಯರಸ್ತೆಯಲ್ಲಿರುವ ಆತೂರು ಪೊಲೀಸ್‌ ಚೆಕ್‌ಪೋಸ್ಟ್‌ನಲ್ಲಿ ಸಂಭವಿಸಿದೆ.

ಪರಾರಿಯಾದ ಪಿಕಪ್ ವಾಹನದಲ್ಲಿ ದನದ ಮಾಂಸ ಸಾಗಿಸಲಾಗುತ್ತಿತ್ತು ಎಂದು ಸ್ಥಳೀಯರು ಆರೋಪವನ್ನು ಮಾಡಿದ್ದಾರೆ.

ಪಿಕಪ್ ವಾಹನ ಅತೀ ವೇಗವಾಗಿ ಚೆಕ್‌ಪೋಸ್ಟ್‌ನತ್ತ ನುಗ್ಗಿದ್ದು, ಕರ್ತವ್ಯದಲ್ಲಿದ್ದ ಪೊಲೀಸ್‌ ಸಿಬಂದಿ ಗಾಬರಿಗೊಂಡು ಪಕ್ಕಕ್ಕೆ ಹಾರಿ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಇನ್ನು, ಪರಾರಿಯಾದ ವಾಹನವನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬೆನ್ನಟ್ಟಿದಾಗ ಚಾಲಕ ವಾಹನವನ್ನು ಗೋಳಿತ್ತಡಿ ಸಮೀಪದ ಶಾರದಾ ನಗರದಲ್ಲಿ ಬಿಟ್ಟು ಪರಾರಿಯಾಗಿದ್ದ ಎಂದು ಹೇಳಲಾಗಿದೆ.

ವಾಹನದಲ್ಲಿದ್ದ ದನದ ಮಾಂಸವನ್ನು ದಾರಿಮಧ್ಯೆ ಬೇರೆಡೆಗೆ ಸಾಗಿಸಲಾಗಿದೆ ಎಂಬ ಆರೋಪವೂ ಕೂಡಾ ವ್ಯಕ್ತವಾಗಿದೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನವನ್ನು ವಶಪಡಿಸಿಕೊಂಡು ಆರೋಪಿ ಚಾಲಕ ಕೊಯಿಲ ಜನತಾ ಕಾಲನಿ ನಿವಾಸಿ ಬಶೀರ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!