ಬಂಟ್ಟಾಳ: ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ: ಘನ ವಾಹನಗಳ ಸಂಚಾರ ಬಂದ್
ಬಂಟ್ವಾಳ -ಮೂಡುಬಿದಿರೆ ಕುದ್ಕೋಳಿ ಕ್ರಾಸ್ ಬಳಿ ಬೃಹತ್ ದೇವದಾರ ವೃಕ್ಷವೊಂದು ಇದ್ದಕ್ಕಿದ್ದಂತೆ ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸಂಚಾರ ಅಯೋಮಯವಾಗಿದೆ.
ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಈ ಸ್ಥಳದಲ್ಲಿದ್ದ ಹಳೆಯ ಮರವಾಗಿದ್ದು, ಬೇರು ಸವೆತಕ್ಕೊಳಗಾಗಿ ಧರಾಶಾಯಿಯಾಗಿದೆ. ಲಾರಿ,ಬಸ್ಸು,ಪಿಕಪ್ ಗಳಂತಹ ವಾಹನಗಳ ಸಂಚಾರ ಅಸಾಧ್ಯವಾಗಿದೆ. ಕಾರು, ಆಟೋರಿಕ್ಷಾ, ದ್ವಿಚಕ್ರ ವಾಹನಗಳ ಸಂಚಾರ ಸಾಧ್ಯವಾದರೂ ಅಪಾಯ ಆಹ್ವಾನಿಸುವಂತಿದೆ. ಸಂಬಂಧಪಟ್ಟ ಪಂಚಾಯತ್, ಲೋಕೋಪಯೋಗಿ ಇಲಾಖೆ, ಆರಕ್ಷಕ ಇಲಾಖೆ ತಕ್ಷಣ ಸ್ಪಂದಿಸಬೇಕಾಗಿದೆ.




