March 19, 2026

ಬಂಟ್ವಾಳ: ಅಜ್ಜಿಬೆಟ್ಟು ಬಳಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಕೂಲಿ ಕಾರ್ಮಿಕ ಮೃತ್ಯು
 

0
water-drowning-hands-sea-wallpaper-preview.jpg

ಬಂಟ್ವಾಳ: ಕಾಲು ಜಾರಿ ಕೆರೆಗೆ ಬಿದ್ದು ಕೂಲಿ ಕಾರ್ಮಿಕನೊರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ವಾಮದಪದವಿನಲ್ಲಿ ನಡೆದಿದೆ.

ವಾಮದಪದವು ಅಜ್ಜಿಬೆಟ್ಟು ಗ್ರಾಮದ ಪಾಲೆದಡಿ ನಿವಾಸಿ ವಾಸು ಪೂಜಾರಿ (52) ಮೃತಪಟ್ಟ ವ್ಯಕ್ತಿ. ಪಾಲೆದಡಿ ದಿ.ರಘಪತಿ ಭಟ್ ಅವರ ಮನೆಯ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಬಿದ್ದ ಕೆಲವೇ ಸಮಯದಲ್ಲಿ ಇವರ ಜೊತೆ ಕೆಲಸ ಮಾಡುತ್ತಿದ್ದ ಕೆಲಸಗಾರರು ಮನೆಯವರಿಗೆ ತಿಳಿಸಿ,ಸ್ಥಳೀಯ ಯುವ ನಾಯಕ ದಿನೇಶ್ ಶೆಟ್ಟಿ ದಂಬೆದಾರ್ ಅವರ ತಂಡ ಕೆರೆಯಲ್ಲಿ ಹುಡುಕಿ ಇವರನ್ನು ಮೇಲಕ್ಕೆತ್ತಿ ಬದುಕಿಸುವ ಕೆಲಸಕ್ಕೆ ಪ್ರಯತ್ನ ಮಾಡಿದೆ. ಇವರ ಪ್ರಯತ್ನ ಫಲಿಸದೆ ಆದಾಗಲೇ ಮೃತರಾಗಿದ್ದಾರೆ ಎಂದು ಹೇಳಲಾಗಿದೆ. ಬಂಟ್ವಾಳ ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!