March 19, 2026

ಉಳ್ಳಾಲ: ಸೋಮೇಶ್ವರ ಸಮುದ್ರ ತೀರದಲ್ಲಿ ಕಾರ್ ಡೀಲರ್ ನಾಪತ್ತೆ: ಸ್ಥಳದಲ್ಲಿ ಮೊಬೈಲ್, ಕಾರು ಪತ್ತೆ: ಈಜುಗಾರರಿಂದ ಹುಡುಕಾಟ ಆರಂಭ
 

0
20230426_164444.jpg

ಉಳ್ಳಾಲ: ಸೋಮೇಶ್ವರ ಸಮುದ್ರ ತೀರದ ರುದ್ರಪಾದೆಯಲ್ಲಿ ಉಳ್ಳಾಲದ ಧರ್ಮನಗರ ನಿವಾಸಿ ಕಾರು ಡೀಲರ್ ಆಗಿರುವ ವ್ಯಕ್ತಿಯ ಚಪ್ಪಲಿ, ಮೊಬೈಲ್ ಮತ್ತು ಕಾರು ಪತ್ತೆಯಾಗಿದೆ.

ಜಿನ್ನಪ್ಪ ಪೂಜಾರಿ ಎಂಬವರ ಪುತ್ರ ವಸಂತ್ ಅಮೀನ್ (49) ನಾಪತ್ತೆಯಾದವರು.

ಮೂಲತ: ಉಳ್ಳಾಲದ ಬಸ್ತಿಪಡ್ಪು ನಿವಾಸಿ ಆಗಿರುವ ಇವರು ಉಳ್ಳಾಲದ ಧರ್ಮನಗರದಲ್ಲಿ ಕೆಲ ತಿಂಗಳುಗಳ ಹಿಂದಷ್ಟೇ ಸುಸಜ್ಜಿತವಾದ ಮನೆಯನ್ನು ಕಟ್ಟಿದ್ದರು. ವಿವಾಹಿತರಾಗಿರುವ ವಸಂತ್ ಅವರಿಗೆ ಹೆಣ್ಣು ಮಗುವಿದೆ.

ಇಂದು ಬೆಳಿಗ್ಗೆ ಮನೆಯಿಂದ ಪತ್ನಿಯಲ್ಲಿ ತಿಳಿಸಿ ಕೆಲಸಕ್ಕೆಂದು ಹೋದವರು ನಾಪತ್ತೆಯಾಗಿದ್ದಾರೆ. ಸ್ಥಳೀಯರು ಸೋಮೇಶ್ವರ ಸಮುದ್ರ ತೀರದಲ್ಲಿ ಕಾರು ಹಾಗೂ ರುದ್ರಪಾದೆಯಲ್ಲಿ ಪಸ್೯ ,ಚಪ್ಪಲಿ ಹಾಗೂ ಮೊಬೈಲ್ ಅನ್ನು ಪತ್ತೆಹಚ್ಚಿದ್ದಾರೆ.

ಸ್ಥಳೀಯ ಈಜುಗಾರರ ಸಹಾಯದಿಂದ ಸಮುದ್ರದಲ್ಲಿ ವಸಂತ್ ಅಮೀನ್ ಅವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!