March 19, 2026

ಪ್ರಿಯಕರನ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಮೊಬೈಲಿನಲ್ಲಿ ವೀಡಿಯೊ ಮಾಡಿ ನೇಣಿಗೆ ಶರಣಾದ ವಿವಾಹಿತ ಮಹಿಳೆ

0
image_editor_output_image2059518786-1682498371593.jpg

ವಿಜಯಪುರ: ವಿವಾಹಿತ ಮಹಿಳೆ ಪ್ರಿಯಕರನ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಮೊಬೈಲಿನಲ್ಲಿ ವೀಡಿಯೊ ಮಾಡಿ ನೇಣಿಗೆ ಶರಣಾಗಿರುವ ಭಯಾನಕ ಘಟನೆ ವಿಜಯಪುರದ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ನಡೆದಿದೆ.

ಸುಹಾನಾ ಸೋನಾರ್ (21) ಆತ್ಮಹತ್ಯೆಗೆ ಶರಣಾದ ವಿವಾಹಿತ ಮಹಿಳೆ.

ಆಕೆಗೆ ಪ್ರಿಯಕರ ಅಲ್ತಾಫ್ ಸುಲೈಮಾನ್ ಗಂಡನನ್ನು ಬಿಟ್ಟು ನನ್ನೊಂದಿಗೆ ಬಾ, ಇಲ್ಲವೆಂದರೆ ನನ್ನೊಂದಿಗಿರುವ ಫೋಟೋವನ್ನು ನಿನ್ನ ಗಂಡನಿಗೆ ತೋರಿಸುತ್ತೇನೆ ಎಂದು ಹೇಳಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಇದರಿಂದ ಮರ್ಯಾದೆಗೆ ಹೆದರಿ ಸುಹಾನಾ ಆತ್ಮಹತ್ಯೆ ಮಾಡಕೊಂಡಿದ್ದಾಳೆ.

ಉಪ್ಪಲದಿನ್ನಿ ಗ್ರಾಮದ ಅಲ್ತಾಫ್ ಸುಲೈಮಾನ್ 1 ವರ್ಷದ ಹಿಂದೆ ಸುಹಾನಾಳೊಂದಿಗೆ ಸಲುಗೆ ಬೆಳೆಸಿ ಪ್ರೀತಿಸುತ್ತಿದ್ದ. ಈ ವಿಷಯ ಸುಹಾನಾ ಪೋಷಕರಿಗೆ ಗೊತ್ತಾಗಿ ಹಿರಿಯರ ಸಮ್ಮುಖದಲ್ಲಿ ಅಲ್ತಾಫ್‌ಗೆ ತಾಕೀತು ಮಾಡಿದ್ದರು. ಬಳಿಕ ಸುಹಾನಾಗೆ ಪೋಷಕರು ಹೊಕ್ಕುಂಡಿ ಗ್ರಾಮದ ಷರೀಫ್ ಸೋನಾರ್ ಜೊತೆಗೆ ಇತ್ತೀಚೆಗೆ ಮದುವೆ ಮಾಡಿಕೊಟ್ಟಿದ್ದರು.

Leave a Reply

Your email address will not be published. Required fields are marked *

error: Content is protected !!