March 19, 2026

ಬಂಟ್ವಾಳ: ದಾಖಲೆ ರಹಿತ ನಗದು ಸಾಗಾಟ ಪತ್ತೆ

0
image_editor_output_image-1939246528-1682486626705.jpg

ಬಂಟ್ವಾಳ: ಫರಂಗಿಪೇಟೆ ಚೆಕ್ ಪೋಸ್ಟ್ ನಲ್ಲಿ ಚುನಾವಣಾ ತಪಾಸಣೆ ನಡೆಯುತ್ತಿದ್ದ ಸಂದರ್ಭ ವಾಹನ ತಪಾಸಣೆ ವೇಳೆ ದಾಖಲೆ ರಹಿತ ನಗದು ಸಾಗಾಟ ಪ್ರಕರಣ ಪತ್ತೆಯಾಗಿದೆ.

ಒಟ್ಟು 3 ಲಕ್ಷ ರೂ ವಾಹನದಲ್ಲಿದ್ದು, ಈ ಕುರಿತು ವಾಹನದವರಲ್ಲಿ ದಾಖಲೆ ಕೇಳಿದಾಗ ಸಮರ್ಪಕ ಉತ್ತರ ದೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ ತಪಾಸಣಾಧಿಕಾರಿಗಳು ನಗದನ್ನು ವಶಪಡಿಸಿಕೊಂಡಿದ್ದಾರೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದ ವೇಳೆ ನಗದು ಕಂಡುಬಂದಿದ್ದು, ಕೂಡಲೇ ಅದನ್ನು ಚುನಾವಣಾ ಸಂಬಂಧಿ ಪರಿಶೀಲನಾ ಸಮಿತಿಗೆ ಹಸ್ತಾಂತರಿಸಿದ್ದು, ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!