September 20, 2024

ದ್ವಿತೀಯ ಪಿಯುಸಿ ಪರೀಕ್ಷೆ: ಕಲ್ಲಡ್ಕ ಅನುಗ್ರಹ ಮಹಿಳಾ ಪದವಿ ಪೂರ್ವ ಕಾಲೇಜ್ ಗೆ ಶೇ. 100 ಫಲಿತಾಂಶ

0


ದ್ವಿತೀಯ ಪಿಯುಸಿ 2022-23ರ ವಾರ್ಷಿಕ ಪರೀಕ್ಷೆಯಲ್ಲಿ ಅನುಗ್ರಹ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇಕಡ 100 ಫಲಿತಾಂಶ ದಾಖಲಾಗಿರುತ್ತದೆ. ವಾಣಿಜ್ಯ ವಿಭಾಗದಲ್ಲಿ 69 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 30 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದರೆ,35ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಖತಿಜತುಲ್ ಫೌಝಿಯಾ ಬಾನು ಇವರು ಲೆಕ್ಕಶಾಸ್ತ್ರ, ಫಾತಿಮಾ ಸಲ್ವಾ ಇವರು ಅರ್ಥಶಾಸ್ತ್ರ ಮತ್ತು ವ್ಯವಹಾರ ಅಧ್ಯಯನದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿರುತ್ತಾರೆ. ಕಲಾ ವಿಭಾಗದಲ್ಲಿ ಶೇಕಡ 81.25 ಫಲಿತಾಂಶ ದಾಖಲಾಗಿರುತ್ತದೆ. ಕಲಾ ವಿಭಾಗದಲ್ಲಿ 16 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 10 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು,ಪ್ರಾಂಶುಪಾಲರು ಮತ್ತು ಉಪನ್ಯಾಸಕಿ ವೃಂದ ವರು ಅಭಿನಂದನೆ ಸಲ್ಲಿಸಿದ್ದಾರೆ.

ಖತಿಜತುಲ್ ಫೌಝಿಯಾ ಬಾನು – 575 – 95.83%
ಫಾತಿಮಾ ಸಲ್ವ – 566- 94.33%.
ಫಾತಿಮಾತ್ ನಾಝಿಯಾ -562- 93.66%
ಮಶೇದ – 568 – 93%
ಫಾತಿಮಾ ಅಸ್ಪಿಯ – 552 -92%
ಫಾತಿಮಾತ್ ತಾಬ್ಶೀರ ಬಿ. ಕೆ – 547- 91.16%
ಜಸೀನಾ ಬಾನು -545 -90.83%
ರಾಫೀದಾ – 544 – 90.66%
ಫಾತಿಮಾತ್ ಜಸೀಲಾ -543- 90.50%
ಆಶಿಕಾ ಬಾನು -542- 90.33%

Leave a Reply

Your email address will not be published. Required fields are marked *

error: Content is protected !!