ಸಂಸದ ಪ್ರತಾಪ್ ಸಿಂಹ ಕಾರು ಪಲ್ಟಿ ಸುಳ್ಳು ಸುದ್ದಿ:
ಸ್ಪಷ್ಟನೆ ನೀಡಿದ ಸಂಸದ ಪ್ರತಾಪ್ ಸಿಂಹ
ರಾಮನಗರ: ಮೈಸೂರು ಸಂಸದ ಪ್ರತಾಪ್ ಸಿಂಹ ಕಾರಿಗೆ ಅಪಘಾತವಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಸುದ್ದಿ ಸುಳ್ಳಾಗಿದೆ.
ಮೈಸೂರಿನಿಂದ ಬೆಂಗಳೂರಿಗೆ ಪ್ರತಾಪ್ ಸಿಂಹ ಹೋಗುತ್ತಿದ್ದರು. ಈ ವೇಳೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮುದುಗೆರೆಯಲ್ಲಿ ಕಾರೊಂದು ಪಲ್ಟಿಯಾಗಿದೆ. ಕಾರಿನಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದ ಪ್ರತಾಪ್ ಸಿಂಹ, ಪಲ್ಟಿಯಾದ ಕಾರಿನ ಬಳಿ ಆಗಮಿಸಿದ್ದರು. ಹೀಗಾಗಿ ಪಲ್ಟಿಯಾದ ಕಾರು ಪ್ರತಾಪ್ ಸಿಂಹನವರದ್ದು ಅಂತ ಸುದ್ದಿ ಹರಿದಾಡಿತ್ತು.
ಇನ್ನು ಈ ಬಗ್ಗೆ ಸ್ಪಷ್ಟತೆ ನೀಡಿರುವ ಸಂಸದ ಪ್ರತಾಪ್ ಸಿಂಹ, ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ಕಾರು ಪಲ್ಟಿಯಾಗಿದೆ. ಆದರೆ ಆ ಕಾರು ನನ್ನದಲ್ಲ. ಪಲ್ಟಿಯಾದ ಕಾರು ಬೇರೆಯವರದ್ದು ಅಂತ ತಿಳಿಸಿದ್ದಾರೆ.
ಕಾರಿನಲ್ಲಿ ಸಂಸದ ಪ್ರತಾಪ್ ಸಿಂಹ, ಪತ್ನಿ, ಮಗಳು, ಚಾಲಕ ಸೇರಿ 6 ಜನರಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ ಅಪಘಾತವಾದ ಕಾರು ನನ್ನದಲ್ಲ ಅಂತ ಸಂಸದರೇ ಮಾಹಿತಿ ನೀಡಿದ್ದಾರೆ.
ಅಪಘಾತ ಕಂಡು ತಕ್ಷಣ ನೆರವಿಗೆ ಧಾವಿಸಿದ್ದ ಪ್ರತಾಪ್ ಸಿಂಹ, ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಉನ್ನಿಕೃಷ್ಣಗೆ ಸೇರಿದ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಉನ್ನಿಕೃಷ್ಣ ಬೆಂಗಳೂರು ನಗರದ ವೈಟ್‌ಫೀಲ್ಡ್ ನಿವಾಸಿ. ಮೈಸೂರಿನಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಕಾರು ಪಲ್ಟಿಯಾಗಿದೆ.





