March 23, 2026

ತೆಕ್ಕಟ್ಟೆ: ಕೆಟ್ಟು ನಿಂತ ಕಂಟೈನರ್‌ಗೆ ಹಿಂದಿನಿಂದ ಬಂದ ಕಾರು ಢಿಕ್ಕಿ

0
image_editor_output_image763780372-1681945699670.jpg

ತೆಕ್ಕಟ್ಟೆ : ಇಲ್ಲಿನ ತೆಕ್ಕಟ್ಟೆ ರಾ.ಹೆ.66 ಕೆನರಾ ಬ್ಯಾಂಕ್‌ ಸಮೀಪ ರಸ್ತೆಯ ಮೇಲೆ ಕೆಟ್ಟು ನಿಂತ ಕಂಟೈನರ್‌ಗೆ ಹಿಂದಿನಿಂದ ಬಂದ ಮಾರುತಿ ಎಸ್‌ ಕ್ರಾಸ್‌ ಕಾರು ನೇರವಾಗಿ ಬಂದು ಢಿಕ್ಕಿ ಯಾಗಿ ಸಂಪೂರ್ಣ ಜಖಂಗೊಂಡಿದದೆ.

ಕಾರು ಚಾಲಕ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಅವರು ಪ್ರಾಣಾಪಾಯದಿಂದ ಪಾರಾದ ಘಟನೆ ಎ.19 ರಂದು ಬೆಳಗ್ಗೆ ಗಂಟೆ 9ರ ಸುಮಾರಿಗೆ ಸಂಭವಿಸಿದೆ .

ಎಂದಿನಂತೆ ಬನ್ನಾಡಿ ಸೋಮನಾಥ ಹೆಗ್ಡೆ ಅವರು ಬನ್ನಾಡಿಯಿಂದ ಕುಂದಾಪುರದ ಕಡೆಗೆ ಸಾಗುತ್ತಿದ್ದ ಸಂದರ್ಭದಲ್ಲಿ ಸೆಲ್ಫ್ ಸಮಸ್ಯೆಯಿಂದಾಗಿ ಕೆಟ್ಟು ನಿಂತ ಕಂಟೈನರ್‌ಗೆ ನೇರವಾಗಿ ಬಂದು ಢಿಕ್ಕಿ ಹೊಡೆದಿದ್ದಾರೆ. ಘಟನೆಯ ತೀವ್ರತೆಗೆ ಕಾರಿನ ಏರ್‌ಬ್ಯಾಗ್‌ಗಳು ತೆರೆದಿದ್ದು, ಸಂಪೂರ್ಣ ಜಖಂಗೊಂಡಿದೆ.

Leave a Reply

Your email address will not be published. Required fields are marked *

error: Content is protected !!