ಪುತ್ತೂರು: ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಗೌಡ ಚಿಲ್ತಡ್ಕ ತೆನೆ ಹೊತ್ತ ಮಹಿಳೆಯೊಂದಿಗೆ ರೋಡ್ ಶೋ
ಪುತ್ತೂರು: ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿರುವ ದಿವ್ಯಪ್ರಭಾ ಗೌಡ ಚಿಲ್ತಡ್ಕರವರು ಎ.19ರಂದು ತೆನೆ ಹೊತ್ತ ಮಹಿಳೆಯೊಂದಿಗೆ ಪುತ್ತೂರಿನಲ್ಲಿ ರೋಡ್ ಶೋ. ಮೂಲಕ ಮತ ಯಾಚಿಸಿದರು.

ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ದರ್ಬೆ ಶ್ರೀರಾಮ ಸೌಧದ ಮಹಡಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಬಳಿಕ ಮೆರವಣಿಯು ಪ್ರಾರಂಭಗೊಂಡಿತು. ದರ್ಬೆ ವೃತ್ತದ ಬಳಿಯಿಂದ ಹೊರಟ ಮೆರವಣಿಗೆಯು ಮುಖ್ಯರಸ್ತೆಯ ಮೂಲಕ ಸಂಚರಿಸಿ ಬೊಳುವಾರು ತನಕ ಸಾಗಿ ಬಂದಿದೆ.
ಗಮನ ಸೆಳೆದ ತೆನೆ ಹೊತ್ತ ಮಹಿಳೆಯ ವೇಷ:
ಜೆಡಿಎಸ್ ಪಕ್ಷದ ಚಿನ್ನೆಯಾಗಿರುವ ತೆನೆ ಹೊತ್ತ ಮಹಿಳೆಯ ವೇಷವು ಮೆರವಣಿಗೆಯಲ್ಲಿ ಎಲ್ಲರ ಗಮನ ಸೆಳೆಯಿತು. ಸಭಾ ಕಾರ್ಯಕ್ರಮ ಹಾಗೂ ಮೆರವಣಿಗೆಯಲ್ಲಿ ತೆನೆ ಹೊತ್ತ ಮಹಿಳೆಯು ವಿಶೇಷ ಆಕರ್ಪಣೆಯಾಗಿತ್ತು. ನಾಟಕ ಕಲಾವಿದ ದಯಾನಂದ ಕುಂತೂರು ತೆನೆ ಹೊತ್ತ ಮಹಿಳೆಯ ವೇಷದಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಸಿಂಗಾರಿ ಮೇಳದ ಸದ್ದಿನೊಂದಿಗೆ ಮೆರವಣಿಗೆಯು ಸಾಗಿ ಬಂದಿದೆ. ಜೆಡಿಎಸ್ ಪಕ್ಷದ ನಿಕಟ ಪೂರ್ವ ಅಧ್ಯಕ್ಷ ಐ.ಸಿ ಕೈಲಾಸ್, ಪ್ರಧಾನ ಕಾರ್ಯದರ್ಶಿ ಮಹಾವೀರ ಜೈನ್, ಮಹಿಳಾ ಘಟಕದ ಅಧ್ಯಕ್ಷೆ ಪದ್ಮಮಣಿಯನ್,ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಪ್ರಿಯ ಸಾಲ್ಯಾನ್, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಪ್ರಭಾಕರ ಸಾಲ್ಯಾನ್, ಉಪ್ಪಿನಂಗಡಿ ಘಟಕದ ಅಧ್ಯಕ್ಷ ಜಯರಾಜ ಅಮೀನ್, ನಗರ ಜೆಡಿಎಸ್ ಅಧ್ಯಕ್ಷ ವಿಕ್ಟರ್ ಗೊನ್ಸಾಲ್ವೀಸ್, ಯುವ ಜೆಡಿಎಸ್ ಶಿವು ಸಾಲ್ಯಾನ್, ಪಕ್ಷದ ಪ್ರಮುಖರಾದ ಗಧಾದರ ಗೌಡ ಮಲ್ಲಾರ, ಇಬ್ರಾಹಿಂ ಪರ್ಪುಂಜ, ರಾಧಾಕೃಷ್ಣ ಸಾಲ್ಯಾನ್, ಶ್ರೇಯಾಂಸ್ ಕುಮಾರ್ ಜೈನ್, ನಝೀರ್ ಬಪ್ಪಳಿಗೆ ಸೇರಿದಂತೆ ಹಲವು ಮಂದಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.




