August 13, 2026

ಪುತ್ತೂರು: ಎಸ್ ಡಿ ಪಿ ಐ ಅಭ್ಯರ್ಥಿ ಶಾಫಿ ಬೆಳ್ಳಾರೆ ಜೈಲ್ ನಿಂದಲೇ ನಾಮಪತ್ರ ಸಲ್ಲಿಕೆ: ಹರಿದು ಬಂದ ಕಾರ್ಯಕರ್ತರ ದಂಡು

0
image_editor_output_image-1772031447-1681890775164

ಪುತ್ತೂರು: ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾಫಿ ಬೆಳ್ಳಾರೆಯವರ ನಾಮ ಪತ್ರ ಸಲ್ಲಿಕೆ ಎ.19ರಂದು ನಡೆಯಿತು. ಎಪಿಎಂಸಿ ಕಚೇರಿ ಬಳಿಯಿರುವ ಪಕ್ಷದ ಕಚೇರಿ ಬಳಿಯಿಂದ ನೂರಾರು ಮಂದಿ ಕಾರ್ಯಕರ್ತರ ಜೊತೆ ಮೆರವಣಿಗೆ ಮೂಲಕ ತೆರಳಿದ ನಾಯಕರು ಶಾಫಿ ಬೆಳ್ಳಾರೆ ಪರವಾಗಿ ನಾಮಪತ್ರ ಸಲ್ಲಿಸಿದರು. ಶಾಫಿ ಬೆಳ್ಳಾರೆಯು ಜೈಲಿನಲ್ಲಿದ್ದು ಈ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ನಾಮಪತ್ರ ಸಲ್ಲಿಕೆ ಮಾಡಿದರು.
ಎಸ್‌ಡಿಪಿಐ ಮುಖಂಡರಾದ ರಿಯಾಝ್ ಫರಂಗಿಪೇಟೆ, ಇಲ್ಯಾಸ್ ತುಂಬೆ, ವಿಕ್ಟರ್ ಮಾರ್ಟಿಸ್, ಅನ್ವರ್ ಸಾದಾತ್ ಬಜತ್ತೂರು, ಅಲ್ಫಾನ್ಸ್ ಫ್ರಾಂಕೋ, ಅಕ್ಬರ್ ಬೆಳ್ತಂಗಡಿ, ರಿಯಾಝ್ ಕಡಂಬು, ಮೂನಿಶ್ ಅಲಿ ಬಂಟ್ವಾಳ, ಶಾಕಿರ್ ಅಳಕೆಮಜಲು, ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್, ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಸಿದ್ದಿಕ್ ಕೆ.ಎ, ಹಮೀದ್ ಸಾಲ್ಮರ, ಎಂ.ಎ ರಫೀಕ್ ಸವಣೂರು, ನಸ್ರಿಯಾ ಬೆಳ್ಳಾರೆ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ಪಕ್ಷದ ನಾಯಕರು ಭಾಷಣ ಮಾಡಿದರು. ಜೈಲಿನಲ್ಲಿರುವ ಅಮಾಯಕ ಶಾಫಿ ಬೆಳ್ಳಾರೆಯವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಮುಖಂಡರು ಕರೆ ನೀಡಿದರು.

Leave a Reply

Your email address will not be published. Required fields are marked *

You may have missed

error: Content is protected !!