August 15, 2026

ಕಡಬ: ಕಾರು ಮತ್ತು ತೂಫನ್ ನಡುವೆ ಭೀಕರ ರಸ್ತೆ ಅಪಘಾತ ಪ್ರಕರಣ: ಮೃತಪಟ್ಟ ನಾಲ್ವರ ಗುರುತು ಪತ್ತೆ: 20 ಮಂದಿಗೆ ಗಾಯ

0
IMG-20230418-WA0010.jpg

 
ಕಡಬ: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಟ್ಟಣದ ಸೇತುವೆ ಸಮೀಪ ಆಲ್ಟೋ ಕಾರು ಮತ್ತು ತೂಫಾನ್ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಘಟನೆ ಇಂದು ನಡೆದಿದ್ದು, ಇದೀಗ ಮೃತಪಟ್ಟವರ ಗುರುತು ಪತ್ತೆಯಾಗಿದೆ‌.

ಆಲ್ಟೊ ಕಾರು ಮತ್ತು ತೂಫಾನ್ ಕಾರು ವಾಹನ ನಡುವೆ ಮುಖಾಮುಕಿ ಅಪಘಾತ ವಾಗಿದ್ದು ಅಪಘಾತದಲ್ಲಿ ಆಲ್ಟೊ ಕಾರಿನಲ್ಲಿದ್ದ ಒಂದು ಮಗು ಸಹಿತ 3 ಜನರು ಮೃತಪಟ್ಟಿದ್ದು, ತೂಫಾನ್ ನಲ್ಲಿದ್ದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.

ಉಲ್ಲಾಸ್ (28), ಗಣೇಶ್ (26), ತಾನ್ವಿಕ್ 4.5 ವರ್ಷ, ನೇತ್ರಾವತಿ (28) ಮೃತಪಟ್ಟವರು.

ಆಲ್ಟೊ ಕಾರಿನಲ್ಲಿದ್ದ ಮೇಘನಾ (22) ನಿಶ್ಚಲ್ (2), ಕುಸುಮ (60), ಇಬ್ಬರು ಮಕ್ಕಳು ಓರ್ವ ಹೆಂಗಸು ಹಾಗೂ ತೂಫಾನ್ ವಾಹನದಲ್ಲಿದ್ದವರ ಪೈಕಿ ವರ್ಷ (17), ಸಂಗೀತ (22), ತೇಜಸ್ (1), ಸುಶೀಲ (50), ಆನಂದ (30), ಘಾನವಿ (14), ದೀಪ (32), ಹಂಸನಿ (10), ಶಿವಾನಿ (5),
ಶೋಭಾ (40), ರಾಘು (32), ಸಂಜು (22), ರಾಜೇಶ್ (28), ರೇಣುಕಾ (65) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!