February 2, 2026

ಶಾಸಕ ಯು.ಟಿ ಖಾದರ್ 3,500 ಕೋಟಿ ರೂ. ಅಧಿಕೃತ ಒಡೆಯ: ರಿಯಾಝ್ ಫರಂಗಿಪೇಟೆ

0
Screenshot_2023-04-18-03-40-04-85_680d03679600f7af0b4c700c6b270fe7.jpg

ಉಳ್ಳಾಲ: ಶಾಸಕ ಯು.ಟಿ ಖಾದರ್ ರೂ.3,500 ಕೋಟಿ ಅಧಿಕೃತ ಒಡೆಯ ಹಾಗೂ 10,000 ಕೋಟಿಗಳ ಅನಧಿಕೃತ ಒಡೆಯನಾಗಿದ್ದಾರೆ ಎಂದು ಉಳ್ಳಾಲದ ಎಸ್ ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಗಂಭೀರವಾಗಿ ಆರೋಪಿಸಿದ್ದಾರೆ.

ಮಂಗಳೂರು ವಿಧಾಸನಭಾ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಸರಳ ವ್ಯಕ್ತಿತ್ವ, ಸ್ಟೀಲ್ ಲೋಟದಲ್ಲಿ ಚಹಾ ಕುಡಿಯುವವರು ಕೆ.ಟಿಯನ್ನು ಸೇವಿಸುವವರು ಉಳ್ಳಾಲದ ಶಾಸಕರು. ಚುನಾವಣೆ ಬಂದಾಗ ಎಲ್ಲರಿಂದಲೂ ಹಣ ಸಂಗ್ರಹಿಸಿ ಚುನಾವಣೆ ಎದುರಿಸುತ್ತಾರೆ. ಆದರೆ ಅವರ ಜತೆಗಿರುವ ಕಾಂಗ್ರೆಸ್ ಕಾರ್ಯಕರ್ತರು ಯುಎಇ ಯ ಬರ್ ದುಬಾಯಿಯಲ್ಲಿರುವ ಎನ್ ಬಿಡಿ ಎಮಿರೇಟ್ಸ್ ಬ್ಯಾಂಕಿನಲ್ಲಿ ಯು.ಟಿ ಅಬ್ದುಲ್ ಖಾದರ್ ಅಲೀಫ್ ಆಲಿ ಹೆಸರಿನಲ್ಲಿರುವ 3,500 ಕೋಟಿ ರೂ. ಮತ್ತು 10,000 ಕೋಟಿ ರೂ. ಯಾರದ್ದು ಅನ್ನುವುದನ್ನು ಪ್ರಶ್ನಿಸಬೇಕಿದೆ. 2013ರಿಂದ 2019 ರವರೆಗೆ ಇದೇ ಹೆಸರಿನಲ್ಲಿ ದುಡ್ಡು ಜಮಾವಣೆ ಆಗಿದೆ. 2019ರ ಇಡಿ ಮತ್ತು ಐಟಿ ದಾಳಿಗೆ ಹೆದರಿ ಅದೇ ಹಣ ಮತ್ತೆ ಯುಕೆ ಬ್ಯಾಂಕಿಗೆ ವರ್ಗಾಯಿಸಲಾಗಿದೆ. ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ ಶಾಸಕರ ಟೇಬಲಿಗೆ ಬರುವ ದಿನಗಳು ದೂರವಿಲ್ಲ.

ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲ ಜೋಕಟ್ಟೆ ಮಾತನಾಡಿ ಭಯಮುಕ್ತ, ಹಸಿವು ಮುಕ್ತ ಶೋಷಿತ ಸಮುದಾಯಗಳಿಗೆ ರಾಜಕೀಯ ಅಧಿಕಾರ ಧಕ್ಕಿಸಿಕೊಡುವ ಉದ್ದೇಶ, ಸಮಸಮಾಜ ನಿರ್ಮಾಣದ ಗುರಿಯೊಂದಿಗೆ ಇರುವ ಏಕೈಕ ಪಕ್ಷ ಎಸ್ ಡಿಪಿಐ.

ಹಿಜಾಬ್ ಸಂದರ್ಭ ಸಹೋದರಿಯರ ಕಣ್ಣೀರು ಕಂಡಾಗ, ಕರಾವಳಿಯ ಏಕೈಕ ಮುಸ್ಲಿಂ ಶಾಸಕನ ಮಾತನ್ನು ಉಳ್ಳಾಲದ ಜನತೆ ಮರೆಯಬಾರದು. ಕಲಿಕೆ ಮೊಟಕುಗೊಳಿಸಿ ಕಣ್ಣೀರು ಹಾಕುತ್ತಿದ್ದ ವಿದ್ಯಾರ್ಥಿನಿಯರು ಪಾಕಿಸ್ತಾನ, ಸೌದಿ ಅರೆಬಿಯಾಕ್ಕೆ ಹೋಗಿ ಅಂದಿರುವುದನ್ನು ನೆನಪಿಸಬೇಕಿದೆ ಎಂದರು.

ರಾಷ್ಟ್ರೀಯ ಸಮಿತಿ ಸದಸ್ಯ ಎನ್.ಯು. ಅಬ್ದುಲ್ ಸಲಾಂ, ರಾಜ್ಯ ಸಮಿತಿ ಸದಸ್ಯರುಗಳಾದ ಮಜೀದ್ ಖಾನ್, ಶಹೀದಾ ತಸ್ನೀಮ್, ಜಿಲ್ಲಾ ಪ್ರ.ಕಾ ಅನ್ವರ್ ಸಆದತ್ ಬಜತ್ತೂರು. ರಾಜ್ಯ ಚುನಾವಣಾ ಸಹ ಉಸ್ತುವಾರಿ ನವಾಝ್ ಉಳ್ಳಾಲ್, ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್, ಜಿಲ್ಲಾ ಉಪಾಧ್ಯಕ್ಷ ರವಿ ಕುಟಿನ್ಹಾ, ಅಶ್ರಫ್ ಮಂಚಿ, ಉಬೈದ್ ಅಮ್ಮೆಂಬಳ, ಸಲಾಮ್ ವಿದ್ಯಾನಗರ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಖಮರುನ್ನೀಸಾ ಪಾವೂರು, ಅನ್ಸಾರ್ ಇನೋಳಿ, ಎಸ್.ಎನ್ ಇಕ್ಬಾಲ್ ಸಜಿಪ, ಸಂತೋಷ್ ಮೊಂತೇರೊ, ಸುನಿತಾ ಸಲ್ದಾನ್ಹ, ನವೀನ್ ಸಲ್ದಾನ್ಹ, ರೆಬೆಕಾ ಸಲ್ದಾನ್ಹ, ಮತ್ತು ಅಬ್ದುಲ್ ರಹಿಮಾನ್ ಮುನ್ನೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!