February 3, 2026

ಕೊರೋನ ಸೋಂಕು ಪ್ರಕರಣ ಹೆಚ್ಚಳ:
ಆಸ್ಟ್ರಿಯಾ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಜಾರಿ

0
image_editor_output_image-243941689-1637562573973.jpg

ವಿಯೆನ್ನಾ: ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಆಸ್ಟ್ರಿಯಾದಲ್ಲಿ ಸೋಮವಾರ ಬೆಳಗಿನ ಜಾವದಿಂದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ.

ಗರಿಷ್ಠ 20 ದಿನಗಳವರೆಗೆ ನಿಯಮಾವಳಿಗಳು ಇರುತ್ತವೆ. ಆದರೆ 10 ದಿನಗಳ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಜನರು ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.

ಡಿ. 13ರ ವೇಳೆಗೆ ಲಾಕ್‌ಡೌನ್‌ ತೆರವು ಮಾಡಲು ಸಾಧ್ಯವಾಗಬಹುದು ಎನ್ನಲಾಗಿದೆ. ಆದರೆ ಲಸಿಕೆ ಪಡೆಯದವರಿಗೆ ಲಾಕ್‌ಡೌನ್‌ ನಿಯಮಾವಳಿಗಳು ಅನ್ವಯಿಸಲಿವೆ.

ಶನಿವಾರ ಆಸ್ಟ್ರಿಯಾದಲ್ಲಿ 15,297 ಪ್ರಕರಣಗಳು ವರದಿಯಾಗಿವೆ. ಒಂದು ವಾರದಿಂದ ಇಲ್ಲಿ ನಿತ್ಯ ಸುಮಾರು 10,000 ಪ್ರಕರಣಗಳು ವರದಿಯಾಗುತ್ತಿತ್ತು.

Leave a Reply

Your email address will not be published. Required fields are marked *

error: Content is protected !!