February 1, 2026

ಪುತ್ತೂರು: ವಿವಾಹಿತ ಮಹಿಳೆ ಬಾವಿಗೆ ಬಿದ್ದು ಮೃತ್ಯು

0
image_editor_output_image-1370954784-1681278346511

ಪುತ್ತೂರು: ಬೆಳ್ತಂಗಡಿಯ ಮಹಿಳೆಯೊಬ್ಬರು ಪುತ್ತೂರು ಬೆಟ್ಟಂಪಾಡಿ ಗ್ರಾಮದ ಗುಮ್ಮಟಗದ್ದೆಯ ತವರು ಮನೆಯವರ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಎ. 10ರಂದು ನಡೆದ ಬಗ್ಗೆ ವರದಿಯಾಗಿದೆ.

ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಉದ್ದದಪಳಿಕೆ ಪುರುಷೋತ್ತಮ ಅವರ ಪತ್ನಿ ಪುಣ್ಯಶ್ರೀ ಮೃತಪಟ್ಟವರು.

ಗುಮ್ಮಟಗದ್ದೆಯ ಬಾಲಕೃಷ್ಣ ಅವರು ಪುತ್ರಿ ಪುಣ್ಯಶ್ರೀಯವರನ್ನು 2017ರ ಜ. 1ಕ್ಕೆ ಬೆಳ್ತಂಗಡಿಯ ಪುರುಷೋತ್ತಮ ಅವರಿಗೆ ವಿವಾಹ ಮಾಡಿಸಿದ್ದರು. ಪುರುಷೋತ್ತಮ ಮತ್ತು ಪುಣ್ಯಶ್ರಿ ದಂಪತಿಗೆ ಇಬ್ಬರು ಮಕ್ಕಳು. ಎ. 4ರಂದು ತವರು ಮನೆಗೆ ಪುಣ್ಯಶ್ರೀ ಬಂದಿದ್ದರು.

ಎ. 10ರಂದು ಅವರು ಪತಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದರು. ರಾತ್ರಿ ವೇಳೆ ಚಿಕ್ಕಮ್ಮ ಲತಾ ಅವರ ಮೊಬೈಲ್‌ಗೆ ಕರೆ ಮಾಡಿ ತಾನು ಸಾಯುವುದಾಗಿ ಹೇಳಿ ಬಾವಿಗೆ ಹಾರಿದ್ದರು. ಈ ಕುರಿತು ಮಾಹಿತಿ ಅರಿತು ಪುಣ್ಯಶ್ರೀಯವರನ್ನು ಬಾವಿಯಿಂದ ಮೇಲಕ್ಕೆತ್ತಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದಾಗ ಆಗಲೇ ಮೃತಪಟ್ಟಿದ್ದರು. ಘಟನೆ ಕುರಿತು ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!