February 3, 2026

ಕಾಸರಗೋಡು: ಹೊಳೆಯಲ್ಲಿ ಮುಳುಗಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಮೃತ್ಯು

0
IMG-20230411-WA0025.jpg

ಕಾಸರಗೋಡು: ಹೊಳೆಯಲ್ಲಿ ಮುಳುಗಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಮೃತ ಪಟ್ಟ ಘಟನೆ ಅಡೂರಿ ನಲ್ಲಿ ನಡೆದಿದೆ.

ಅಡೂರು ದೇವರಡ್ಕ ದ ಶಾಫಿ ರವರ ಪುತ್ರ ಮುಹಮ್ಮದ್ ಆಶೀಕ್ (ಮೂರೂವರೆ) ಮತ್ತು ಹಸೈನಾರ್ ರವರ ಪುತ್ರ ಮುಹಮ್ಮದ್ ಫಾಸಿಲ್ (3) ಮೃತ ಪಟ್ಟವರು.

ಇಂದು ಮಧ್ಯಾಹ್ನ ಪಯಸ್ವಿನಿ ಹೊಳೆಯಲ್ಲಿ ಅಡೂರು ದೇವರಡ್ಕದಲ್ಲಿ ಘಟನೆ ನಡೆದಿದೆ. ಹೊಳೆಗೆ ಸ್ನಾನ ಕ್ಕಿಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಮಕ್ಕಳು ಮುಳುಗುತ್ತಿರುವುದನ್ನು ಗಮನಿಸಿದ ಇತರ ಮಕ್ಕಳು ಕೂಡಲೇ ಪರಿ ಸರ ವಾಸಿ ಗಳಿಗೆ ತಿಳಿಸಿದ್ದು, ಧಾವಿಸಿ ಬಂದ ಪರಿಸರ ವಾಸಿಗಳು ಮೇಲಕ್ಕೆತ್ತಿ ಮುಳ್ಳೆರಿಯ ದ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಮೃತದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರ ದಲ್ಲಿ ರಿಸಲಾಗಿದೆ . ಆದೂರು ಠಾಣಾ ಪೊಲೀಸರು ಮುಂದಿನ ಕ್ರಮ ತೆಗೆದು ಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!