September 3, 2026

ಬಾಲಕಿಯಿಂದ  ಮೊಬೈಲ್‌ ಕಸಿದುಕೊಂಡ ಪೋಷಕರು: 7 ಅಂತಸ್ತಿನ ಕಟ್ಟಡದಿಂದ ಜಿಗಿದು ಬಾಲಕಿ ಆತ್ಮಹತ್ಯೆ

0
image_editor_output_image-1943917715-1681190798127.jpg

ಮುಂಬಯಿ: ಇತ್ತೀಚೆಗೆ ವಯಸ್ಸಲ್ಲದ ವಯಸ್ಸಿನಲ್ಲಿ, ಬಾಳಿ ಬದುಕಬೇಕಾದ ಜೀವಗಳು ತಮ್ಮ ಜೀವನವನ್ನೇ ಅಂತ್ಯವಾಗಿಸುತ್ತಿದ್ದಾರೆ. ಕ್ಷುಲಕ ಕಾರಣವನ್ನಿಟ್ಟುಕೊಂಡು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಶುಕ್ರವಾರ ಸಂಜೆ ಮುಂಬಯಿನಲ್ಲಿ ನಡೆದಿದೆ.

ಮುಂಬಯಿಯ ಪಶ್ಚಿಮ ಉಪನಗರದ ಅಲ್ವಾನಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 15 ವರ್ಷದ ಬಾಲಕಿಯೊಬ್ಬಳು 7 ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಬಳಿಕ ಪೊಲೀಸರು ಬಾಲಕಿಯ ಪೋಷಕರನ್ನು ಪತ್ತೆ ಹಚ್ಚಿ, ವಿಚಾರವನ್ನು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಕಳೆದ ಕೆಲ ಸಮಯದಿಂದ ಬಾಲಕಿ ಹೆಚ್ಚು ಮೊಬೈಲ್‌ ಬಳಸುತ್ತಿದ್ದಳು. ಇದರಿಂದ ಬಾಲಕಿಗೆ ಪೋಷಕರು ಬುದ್ದಿಮಾತನ್ನು ಹೇಳಿದ್ದರು.

ಆದರೂ ಬಾಲಕಿ ಇದನ್ನು ಕೇಳದ ಕಾರಣ ಪೋಷಕರು ಬಾಲಕಿಯಿಂದ ಮೊಬೈಲ್‌ ಕಸಿದುಕೊಂಡಿದ್ದಾರೆ ಇದೇ ಕಾರಣದಿಂದ ಬಾಲಕಿ 7 ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!