August 21, 2026

ಗದಗ: ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ:
ಒಂದೇ ಕುಟುಂಬದ ಮೂವರು ಮೃತ್ಯು

0
n334797466163755719761372e271ec51f32389b4157367170155c6ea524f8f65159d80e9679c0b269033dd.jpg

ಗದಗ: ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

ಗದಗದ ಮುಂಡರಗಿ ತಾಲೂಕಿನ ಡಂಬಳ-ಮೇವುಂಡಿ ಬಳಿ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಒಬ್ಬರ ಸ್ಥಿತಿ ಗಂಭೀರವಾಗಿದೆ.

ಮೃತರನ್ನು ಶಿವಾನಂದಯ್ಯ ಹಿರೇಮಠ (45), ಅನಸೂಯಾ (70) ಮತ್ತು ಮನಸ್ವಿ (6) ಮೃತ ದುರ್ದೈವಿಗಳು. ಶಿವಾನಂದಯ್ಯ ಪತ್ನಿ ಗಿರಿಜಾ ಸ್ಥಿತಿ ಚಿಂತಾಜನಕವಾಗಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ಟ್ರ್ಯಾಕ್ಟರ್ ಹಿಂಬದಿಗೆ ಡಿಕ್ಕಿ ಹೊಡೆದಿದ್ದು ಅಪಘಾತಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!