February 1, 2026

ಉಡುಪಿ: 8 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ:
ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು

0
Screenshot_2021-11-22-10-39-28-50_680d03679600f7af0b4c700c6b270fe7.jpg

ಉಡುಪಿ: ಎಂಟು ವರ್ಷ ಪ್ರಾಯದ ಬಾಲಕಿಯ ಮೇಲೆ ಇಬ್ಬರು ಸಂಬಂಧಿ ಯುವಕರು ನಿರಂತರವಾಗಿ ಎರಡು ತಿಂಗಳು ಲೈಂಗಿಕ ದೌರ್ಜನ್ಯ ಘಟನೆ ಹಿರಿಯಡಕ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಆರೋಪಿಗಳಾದ ಸಂದೀಪ್‌ ನಾಯ್ಕ ಹಾಗೂ ವಿಘ್ನೇಶ್‌ ನಾಯ್ಕ ಅವರನ್ನು ಬಂಧಿಸಲಾಗಿದೆ. ಸಂದೀಪ್‌ ನಾಯ್ಕ ವಿವಾಹಿತ. ವೃತ್ತಿಯಲ್ಲಿ ಪೈಂಟರ್‌ ಆಗಿದ್ದ. ಮತ್ತೂಂದು ಆರೋಪಿಯೂ ಸಣ್ಣಪುಟ್ಟ ಕೆಲಸಗಳನ್ನು ಸ್ಥಳೀಯವಾಗಿ ಮಾಡುತ್ತಿದ್ದ. ಈ ಇಬ್ಬರೂ ಆರೋಪಿಗಳ ಮೇಲೆ ಈ ಹಿಂದೆಯೂ ಇಂತಹ ಆರೋಪ ಸ್ಥಳೀಯವಾಗಿ ಕೇಳಿಬಂದಿತ್ತು.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಬಾಲಕಿಯ ತಂದೆ ಹಾಗೂ ತಾಯಿ ಕೆಲಸಕ್ಕೆಂದು ಮನೆಯಿಂದ ಹೊರ ಹೋದವರು ರಾತ್ರಿ ಮನೆಗೆ ಮರಳುತ್ತಿದ್ದರು. ಈ ವೇಳೆ ಮನೆಯಲ್ಲಿ ಒಬ್ಬಳೇ ಇರುತ್ತಿದ್ದ ಬಾಲಕಿಯನ್ನು ಆಕೆಯ ತಂದೆಯ ಸಂಬಂಧಿಕ ಈ ಇಬ್ಬರು ತಂದೆ, ತಾಯಿಯನ್ನು ಕೊಲ್ಲುವುದಾಗಿ ಬಾಲಕಿಯನ್ನು ಬೆದರಿಸಿ ನಿರಂತರ ದೌರ್ಜನ್ಯ ಮಾಡಿದ್ದಾರೆ ಎಂದು ಸಂತ್ರಸ್ತೆ ಬಾಲಕಿಯ ತಾಯಿ ದೂರಿನಲ್ಲಿ ವಿವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!