ನ್ಯೂಯಾರ್ಕ್ ನಲ್ಲಿ ರಸ್ತೆ ಅಪಘಾತ: ಭಾರತೀಯ ಮೂಲದ ವ್ಯಕ್ತಿ ಸ್ಥಳದಲ್ಲೇ ಸಾವು
ನ್ಯೂಯಾರ್ಕ್: ಬೋಸ್ಟನ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ನೇಹಿತನನ್ನು ಕರೆದುಕೊಂಡು ಬರಲು ಹೋಗಿದ್ದ 47 ವರ್ಷದ ಭಾರತೀಯ ಮೂಲದ ಅಮೆರಿಕನ್ ಡೇಟಾ ವಿಶ್ಲೇಷಕರೊಬ್ಬರು ಬಸ್ ಢಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಆಂಧ್ರಪ್ರದೇಶ ಮೂಲದ ವಿಶ್ವಚಂದ್ ಕೊಲ್ಲಾ ಅವರು ಟಕೆಡಾ ಫಾರ್ಮಾಸ್ಯುಟಿಕಲ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.
ಮಾರ್ಚ್ 28 ರಂದು ಈ ಘಟನೆ ನಡೆದಾಗ ಅವರು ಬೋಸ್ಟನ್‌ನ ಲೋಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂದರ್ಶಕ, ಸಂಗೀತಗಾರ ಸ್ನೇಹಿತನನ್ನು ಕರೆದುಕೊಂಡು ಹೋಗುತ್ತಿದ್ದರು ಎಂದು ಯುಎಸ್ ಮಾಧ್ಯಮ ವರದಿ ತಿಳಿಸಿದೆ.





