February 3, 2026

ಕ್ರಿಕೆಟ್‌ ಪಂದ್ಯಾಟದಲ್ಲಿ ‘ನೋಬಾಲ್‌’ ಎಂದ ಅಂಪೈರ್‌ ನ್ನು ಚಾಕುವಿನಿಂದ ಇರಿದು ಕೊಲೆಗೈದ ಆಟಗಾರ

0
image_editor_output_image-342883984-1680564342667.jpg

ಭುವನೇಶ್ವರ್: ಕ್ರಿಕೆಟ್‌ ಪಂದ್ಯ ನಡೆಯುತ್ತಿದ್ದ ವೇಳೆ ʼನೋಬಾಲ್‌ʼ ನೀಡಿದ ಅಂಪೈರ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಒಡಿಶಾದ ಕಟಕ್‌ನಲ್ಲಿ ನಡೆದಿದೆ.

ಮೃತ ವ್ಯಕ್ತಿ ಲಕ್ಕಿ ರಾವುತ್ (22) ಎಂದು ಗುರುತಿಸಲಾಗಿದೆ. ಪಂದ್ಯದ ವೇಳೆ ‘ನೋಬಾಲ್’ ನೀಡಿದ ವಿಚಾರಕ್ಕೆ ಸ್ಮೃತಿ ರಂಜನ್ ರೌತ್ ಎಂಬಾತ ಜಗಳ ತೆಗೆದಿದ್ದಾರೆ. ನಂತರ ಹರಿತವಾದ ಚಾಕುವಿನಿಂದ ಇರಿದಿದ್ದಾನೆ.

ಬ್ರಹ್ಮಪುರ ಮತ್ತು ಶಂಕರಪುರ ಎಂಬ ಎರಡು ತಂಡಗಳ ನಡುವೆ ಕ್ರಿಕೆಟ್‌ ಪಂದ್ಯ ನಡೆಯುತ್ತಿತ್ತು. ಈ ವೇಳೆ ಅಂಪೈರ್‌ ನೋಬಾಲ್‌ ನೀಡಿದ್ದರು.

ಈ ಸಂಬಂಧ ಅಂಪೈರ್‌ ಹಾಗೂ ಆಟಗಾರನ ನಡುವೆ ವಾಗ್ವಾದ ನಡೆದಿದೆ. ನಂತರ ಅಂಪೈರ್‌ಗೆ ಆಟಗಾರ ಚಾಕುವಿನಿಂದ ಇರಿದಿದ್ದಾನೆ.

ಆರೋಪಿಯನ್ನು ಮೈದಾನದಲ್ಲಿ ಇದ್ದವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!