ಅರ್ಜುನ ಪ್ರಶಸ್ತಿ ಪಡೆದ ಮೊದಲ ಭಾರತೀಯ ಕ್ರಿಕೆಟಿಗ ‘ಸಲೀಂ ದುರಾನಿ’ ನಿಧನ
ನವದೆಹಲಿ: ಅರ್ಜುನ ಪ್ರಶಸ್ತಿ ಪಡೆದ ಮೊದಲ ಭಾರತೀಯ ಕ್ರಿಕೆಟಿಗ, ಭಾರತದ ಮಾಜಿ ಆಲ್‌ರೌಂಡರ್ ಸಲೀಂ ದುರಾನಿ (88) ಇಂದು ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಲೀಂ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಈ ವರ್ಷದ ಜನವರಿಯಲ್ಲಿ ನೆಲಕ್ಕೆ ಬಿದ್ದ ಕಾರಣ ಅವರ ತೊಡೆಯ ಮೂಳೆ ಮುರಿತದ ನಂತರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಜೊತೆಗೆ ಕ್ಯಾನ್ಸರ್‌ನಿಂದಲೂ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ..
ಇನ್ನು ಆಕ್ರಮಣಕಾರಿ ಎಡಗೈ ಬ್ಯಾಟ್ಸ್‌ಮನ್, ದುರಾನಿ ಭಾರತಕ್ಕಾಗಿ 29 ಟೆಸ್ಟ್‌ಗಳಲ್ಲಿ 1202 ರನ್ ಗಳಿಸಿದ್ದು, 75 ವಿಕೆಟ್‌ಗಳನ್ನು ಪಡೆದಿದ್ದರು.
ಸಲೀಂ ದುರಾನಿ ಭಾರತ ತಂಡದಲ್ಲಿ ಆಲ್ ರೌಂಡರ್ ಆಗಿ ಆಡುತ್ತಿದ್ದು, ಆಕ್ರಮಣಕಾರಿ ಬ್ಯಾಟಿಂಗ್ ಹೊರತಾಗಿ, ಅವರು ಆಫ್ ಸ್ಪಿನ್ ಬೌಲಿಂಗ್ ಅನ್ನು ಸಹ ಮಾಡುತ್ತಿದ್ದರು. ಅವರ ಕಾಲದಲ್ಲಿ ಭಾರತದ ಅತ್ಯಂತ ಹೆಸರಿನ ಕ್ರಿಕೆಟಿಗರಾಗಿದ್ದರು.