ಕಲ್ಲಡ್ಕ: ನುವಾ-ಮೆಡ್ ಹೆಲ್ತ್ ಕೇರ್ ಸೆಂಟರ್ ಉದ್ಘಾಟನೆ
ಕಲ್ಲಡ್ಕ: ಮಹಿಳಾ ಆಲೋಪತಿಕ್ ವೈದ್ಯೆ ಡಾ. ಆಶಿಕಾ ಆಯಿಷಾ ಫರ್ಹಾನಾ ಅವರ ‘ನುವಾ-ಮೆಡ್ ಹೆಲ್ತ್ ಕೇರ್ ಸೆಂಟರ್’ ಭಾನುವಾರ (21/11) ಕಲ್ಲಡ್ಕದ ಹ್ಯಾಪಿ ಸ್ಟಾರ್ ಟವರ್ ನಲ್ಲಿ ಉದ್ಘಾಟನೆಗೊಂಡಿತು.
ಪಾಣೆಮಂಗಳೂರು ಅಲ್ ಶಿಫಾ ನರ್ಸಿಂಗ್ ಹೋಮ್ ಮುಖ್ಯಸ್ಥರಾದ ಡಾ. ಎಂ.ಎಂ. ಶರೀಫ್ ಉದ್ಘಾಟಿಸಿದರು. ಕಲ್ಲಡ್ಚ ಜುಮಾ ಮಸೀದಿ ಖತೀಬ್ ಶೇಖ್ ಮುಹಮ್ಮದ್ ಇರ್ಫಾನಿ ಫೈಝಿ ದುಆ ನೆರವೇರಿಸಿದರು. ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಸುನ್ನೀ ಜಂಇಯತುಲ್ ಉಲಮಾದ ಉಪಾಧ್ಯಕ್ಷರಾದ ಯು.ಕೆ. ಮಹಮ್ಮದ್ ಸಅದಿ, ನಿವೃತ್ತ ಉಪಕುಲಪತಿ ಪ್ರೊಫೆಸರ್ ಅಬ್ದುಲ್ ರಹಿಮಾನ್, ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಉದ್ಯಮಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಕಲ್ಲಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಭಿಷೇಕ್ ಎನ್., ನಿವೃತ್ತ ಶಿಕ್ಷಕರಾದ ನೂರುಲ್ ಅಮೀನ್ ಮಾಸ್ಟರ್, ಕರ್ನಾಟಕ ಜಂಇಯತುಲ್ ಉವಮಾ ಸದಸ್ಯ ಯು.ಕೆ. ಯೂಸುಫ್ ಸಅದಿ, ವಿಟ್ಲದ ಹಿರಿಯ ಜವುಳಿ ಉದ್ಯಮಿ ಕುಂಞಿಪ್ಪ ಹಾಜಿ ಸೆರಂತಿಮಠ, ಮಂಜನಾಡಿ ಅಲ್ ಮದೀನಾ ಪಾಲಿ ಕ್ಲಿನಿಕ್ ನ ಡಾ. ಫಯಾಝ್, ಡಾ. ಸಮ್ರೀನಾ, ಉದ್ಯಮಿ ಕೆ.ಎಸ್. ಮುಸ್ತಫಾ, ಬಂಟ್ವಾಳ ತಾ.ಪಂ. ಮಾಜಿ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ ಬೋಳಂತೂರು, ಸುಲೈಮಾನ್ ಹಾಜಿ ಕಲ್ಲಡ್ಕ, ಸುಲೈಮಾನ್ ಸೂರಿಕುಮೇರು, ರಫೀಕ್ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಬಂಟ್ವಾಳ ತಾಲೂಕು ಜಂಇಯ್ಯತುಲ್ ಫಲಾಹ್ ಉಪಾಧ್ಯಕ್ಷ ರಶೀದ್ ವಿಟ್ಲ ಸ್ವಾಗತಿಸಿದರು. ಹಜಾಜ್ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ನುವಾ ಮೆಡ್ ಹೆಲ್ತ್ ಕೇರ್ ಸೆಂಟರ್ ನಲ್ಲಿ ಡಾ. ಆಶಿಕಾ ಆಯಿಷಾ ಫರ್ಹಾನಾ ಅವರು ಸಂಜೆ 4 ರಿಂದ ರಾತ್ರಿ 8 ರ ತನಕ (ಆದಿತ್ಯವಾರ ಹೊರತುಪಡಿಸಿ) ಆರೋಗ್ಯ ಸೇವೆ ನೀಡಲಿರುವರು.