February 4, 2026

ವಿಟ್ಲ: ಅಂಗಡಿ ಮಾಲಕನ ಮನೆಯಲ್ಲಿ ಚಿನ್ನಾಭರಣ ಕಳ್ಳತನ, ಆರೋಪಿಯ ಬಂಧನ

0
image_editor_output_image-1614363568-1680071106891.jpg

ವಿಟ್ಲ : ಕೆಲಸದಾಳು ಅಂಗಡಿ ಮಾಲಕನ ಮನೆಯಲ್ಲಿ ಚಿನ್ನಾಭರಣ ಕಳ್ಳತನ ನಡೆಸಿದ ಪ್ರಕರಣ ವಿಟ್ಲ ಕಸಬ ಗ್ರಾಮದ ರಂಗರಮಜಲು ಎಂಬಲ್ಲಿ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮನು ಅಲಿಯಾಸ್‌ ಮನೋಹರ ಬಂಧಿತ.

ಜ 20 ರಿಂದ ಮಾ 20 ರವರೆಗೆ ಎರಡು ತಿಂಗಳ ಕಾಲ ವಿಟ್ಲ ಕಸಬ ಗ್ರಾಮದ ರಂಗರಮಜಲು ಮುರಳಿಧರ ಎಂಬವರ ಮನೆಯಲ್ಲಿ ಯಾರೂ ಇರಲಿಲ್ಲ.

ಈ ಸಂದರ್ಭವನ್ನು ಬಳಸಿಕೊಂಡ ಆರೋಪಿಯು ಒಟ್ಟು 3.20,000 ಮೌಲ್ಯದ ಒಟ್ಟು 64 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನಗೈದಿದ್ದ.

ಈ ಕುರಿತು ಮುರಳಿಧರ ರವರು ಠಾಣೆಗೆ ದೂರು ನೀಢಿದ್ದು ವಿಟ್ಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!